ಸಲಹೆಗಾರ ಕೆಂಪಯ್ಯಗೆ ಆಯೋಗ ಬ್ರೇಕ್ !! ಹುದ್ದೆ ಪರಿಶೀಲನೆ ಮಾಡಲಿರುವ ಆಯುಕ್ತರು !!

Election Commissioner Sanjeev Kumar Inquired About Kempaiah Post

ಐದು ವರ್ಷಗಳಿಂದ ಪೊಲೀಸ್ ಅಧಿಕಾರಿಗಳನ್ನು ಕಿರುಬೆರಳಲ್ಲಿ ಕುಣಿಸುತ್ತಿದ್ದ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಹುದ್ದೆಗೆ ಇದೀಗ ಕಂಟಕ ಎದುರಾಗಿದೆ.

ಗೃಹ ಸಚಿವರ ಸಲಹೆಗಾರರ ಹುದ್ದೆ ರಾಜಕೀಯ ಹುದ್ದೆಯೋ, ಸರ್ಕಾರಿ ಹುದ್ದೆಯೋ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ರಾಜಭಾರಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತದಾನದ ಜಾಗೃತಿಗಾಗಿ ಸಿದ್ದಪಡಿಸಿರುವ ವೀಡಿಯೋ ಮತ್ತು ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಲಾಯಿತು.ಚುನಾವಣಾ ಆಯುಕ್ತರ ಕಚೇರಿಯಲ್ಲಿ ಸಂಜೀವ್ ಕುಮಾರ್ ಬಿಡಿಗಡೆಗೊಳಿಸಿದರು.ನಂತರ ಮಾತನಾಡಿದ ಅವರು,ನೀತಿ‌ಸಂಹಿತಿ ಜಾರಿಗೆ ಬಂದಿದೆ, ಎಲ್ಲಾ ಕಡೆ ರಾಜಕೀಯ ನಾಯಕರ ಭಾವಚಿತ್ರ ತೆರವು ಮಾಡಲಾಗಿದೆ, ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ, ವಾಹನ ದುರ್ಬಳಕೆ ತಡೆಗೆ ಕ್ರಮ ಕೈಗೊಂಡಿದ್ದೇವೆ, ಏನೇನು ಕ್ರಮ ತೆಗೆದುಕೊಳ್ಳಬೇಕೋ ಮೊದಲ ದಿನವೇ ತೆಗೆದುಕೊಳ್ಳಲಾಗಿದೆ ಎಂದರು. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಸಮಾರಂಭದ ವೇಳೆ ಕಾರ್ಯಕರ್ತರಿಗೆ ಸಿದ್ದಪಡಿಸಿದ್ದ ಊಟ ವಶಪಡೆದು, ಕೇಸು ದಾಖಲಿಸಿಕೊಳ್ಳಲಾಗಿದೆ, ಹೊನ್ನಾವರ ಸಾಗರ್ ರೆಸಿಡೆನ್ಸಿ ಬಳಿ ಏಳು ಲಕ್ಷ ಸೀಜ್ ಮಾಡಿದ್ದೇವೆ, ದೇವರಹಿಪ್ಪರಗಿಯಲ್ಲಿ ಎ.ಎಸ್ ಪಾಟೀಲ್ ನಡಹಳ್ಳಿ ಸೀರೆ ಹಂಚಿಕೆ ಸಂಬಂಧ ಸೀರೆ ವಶ ಪಡೆದು ಪ್ರಕರಣ ದಾಖಲಾಗಿದೆ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಹುದ್ದೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ, ರಾಜಕೀಯ ಸಲಹೆಗಾರ ಪಾತ್ರ ಇರಲ್ಲ, ಆದರೂ ಅದು ರಾಜಕೀಯ ಹುದ್ದೆಯಾ ಅಥವಾ ಸರ್ಕಾರಿ ಹುದ್ದೆಯಾ ಎಂದು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಈವರೆಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚುನಾವಣೆ ಸಂಧರ್ಭದಲ್ಲಿ ಕೆಂಪಯ್ಯ ಅದೇ ಹುದ್ದೆಯಲ್ಲಿದ್ದರೆ ಪೊಲೀಸರ ಮೇಲೆ ಪ್ರಭಾವ ಬೀರಿದಂತಾಗುತ್ತದೆ.