ಮಲೆನಾಡು ಕಾಂಗ್ರೆಸ್ ನಲ್ಲಿ ಗಾಯತ್ರಿ ಜಪ ! ಶಂಕರ್ ಗೆ ಒಲಿಯಲಿದೆಯೇ ಕೈ ಟಿಕೆಟ್ ?

Fight for Congress ticket to defeat CT Ravi.

ಚಿಕ್ಕಮಗಳೂರಿನಲ್ಲಿ ಚುನಾವಣಾ ಅಖಾಡ ಜೋರಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.

adಹಾಲಿ ಶಾಸಕ ಬಿಜಿಪಿಯ ಸಿಟಿ ರವಿಯನ್ನು ಸೋಲಿಸಲು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹಾಗೂ ಮಾಜಿ ಎಂಎಲ್​ಸಿ ಸಿಎಂ ಆಪ್ತೆ ಗಾಯಿತ್ರಿ ಶಾಂತೇಗೌಡ ನಡುವೆ ಟಿಕೆಟ್​ಗಾಗಿ ಪೈಪೋಟಿ ಬಿರುಸಾಗಿದೆ.
ಪೈಪೋಟಿ ಮಧ್ಯೆ ಸಿಎಂ ಆಪ್ತೆ ಎಂದೇ ಗುರುತಿಸಿಕೊಂಡಿರೋ ಗಾಯಿತ್ರಿ ಶಾಂತೇಗೌಡಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಬಿ.ಎಲ್.ಶಂಕರ್ ಚುನಾವಣೆ ಪ್ರಚಾರ ಆರಂಭಿಸಿದ್ದು, ಚಿಕ್ಕಮಗಳೂರು ನಗರದಲ್ಲಿ ಮನೆ ಕೂಡ ಮಾಡಿ ಬಿಢಾರ ಹೂಡಿದ್ದಾರೆ. ಈಗಾಗಲೇ ಕಳೆದ ತಿಂಗಳು ಚಿಕ್ಕಮಗಳೂರಿನಲ್ಲಿ ಜನಾರ್ಶ್ರೀವಾದ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬಂದು ಭಾಷಣ ಮಾಡಿ ಹೋಗಿದ್ದಾರೆ.
ರಾಗಾ ಭಾಷಣವನ್ನ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿ ಬಿ.ಎಲ್.ಶಂಕರ್ ಚಿಕ್ಕಮಗಳೂರಿನಲ್ಲಿ ಮತ್ತಷ್ಟು ಫೇಮಸ್ಸಾಗಿದ್ದಾರೆ. ಸಿಎಂ ಆಪ್ತೆ ಗಾಯಿತ್ರಿ ಶಾಂತೇಗೌಡ ಟಿಕೆಟ್ ಕೈ ತಪ್ಪುದ್ರೆ, ಕಾಂಗ್ರೆಸ್ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದೆ.