ಸಕ್ಕರೆ ನಾಡಿಗೆ ಬಂದ ಪವರ್​ ಮಿನಿಸ್ಟರ್​ಗೆ ಕಾದಿತ್ತು ಆ್ಯಪಲ್​ ಹಾರ!

Flowers Flown through JCB to DK Shivakumar.

ಪ್ರಸಕ್ತ ಚುನಾವಣೆ ಬಳಿಕ ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರೋಕೆ ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸ್ತಿದೆ.

ಅದಕ್ಕಾಗಿ ರಾಜ್ಯದ ಪವರ್​ ಮಿನಿಸ್ಟರ್​​​ಗೆ ಪಕ್ಷದಲ್ಲೂ ಪವರ್​ ಸ್ಥಾನವನ್ನೂ ನೀಡಿದೆ. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ರಾಜ್ಯದ್ಯಾಂತ ಮಿಂಚಿನ ಸಂಚಾರ ನಡೆಸ್ತಿರೋ ಡಿ.ಕೆ.ಶಿವಕುಮಾರ್​ಗೆ ನಿನ್ನೆ ಮಂಡ್ಯದಲ್ಲಿ ಸೇಬುಹಣ್ಣಿನ ಹಾರದ ಸ್ವಾಗತ ಸಿಕ್ಕಿದ್ದು, ಅಭಿಮಾನಿಗಳ ಪ್ರೀತಿಗೆ ಪವರ್​ ಮಿನಿಸ್ಟರ್​ ಮನಸೋತಿದ್ದು ಸುಳ್ಳಲ್ಲ.
ಹೌದು, ರಾಜ್ಯ ಸರ್ಕಾರದ ಇಂಧನ ಖಾತೆ ಜೊತೆಗೆ ಕಾಂಗ್ರೆಸ್​ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರೋ ಸಚಿವ.ಡಿ.ಕೆ.ಶಿವಕುಮಾರ್​ ತಮ್ಮ ಬ್ಯುಸಿ ಶೆಡ್ಯೂಲ್​ ನಡುವೆಯೂ ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ನೀಡಿದ್ರು. ಹೀಗೆ ಸಕ್ಕರೆ ನಾಡಿಗೆ ಬಂದ ಪವರ್ ಮಿನಿಸ್ಟರ್​​​ ಡಿ.ಕೆ.ಶಿವಕುಮಾರ್​ ಅವರನ್ನು, ಅಭಿಮಾನಿಗಳು ತೂಬಿನಕೆರೆಯಿಂದ ಇಂಡುವಾಳುವರೆಗೂ ತೆರೆದ ವಾಹನದಲ್ಲಿ ಡಿಕೆಶಿ ಅವ್ರನ್ನ ಮೆರವಣಿಗೆ ನಡೆಸಿದ್ರು. ಮೆರವಣಿಗೆಗೆ ನೂರಾರು ಯುವ ಕೈ ಕಲಿಗಳು ಬೈಕ್​ನಲ್ಲಿ ಜಾಥಾದಲ್ಲಿ ಪಾಲ್ಗೊಂಡು ಮತ್ತಷ್ಟು ಮೆರಗು ನೀಡಿದ್ರು.

ಈ ವೇಳೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಸಿದ್ದಯ್ಯನ ಕೊಪ್ಪಲು ಗೇಟ್​ ಬಳಿ ಸಚಿವರಿಗೆ ಜೆಸಿಬಿ ಮೂಲಕ ಅಭಿಮಾನದ ಪುಷ್ಪ ವೃಷ್ಟಿ ಹರಿಸಲಾಯ್ತು. ಇಂಡುವಾಳು ವೃತ್ತದಲ್ಲಿ ಸುಮಾರು 300 ಕೆಜಿ ತೂಕದ ನೂರಾರು ಸೇಬಿನ ಹಣ್ಣು ಮತ್ತು ಬಗೆ ಬಗೆಯ ಗುಲಾಬಿ ಹೂವುಗಳಿಂದ ಮಾಡಿದ್ದ ಬೃಹತ್​ ಹಾರವನ್ನ ಕ್ರೇನ್​ ಮೂಲಕ ಹಾಕಿ ಅಭಿಮಾನದ ಗೌರವ ಸಮರ್ಪಿಸಿದ್ರು.
ಮೊದ್ಲು ಕೆಪಿಸಿಸಿ ಸದಸ್ಯ, ಇಂಡುವಾಳು ಎಸ್​.ಸಚ್ಚಿದಾನಂದ ಮನೆಗೆ ಭೇಟಿ ನೀಡಿದ್ದ ಸಚಿವ ಡಿಕೆಶಿ, ರಹಸ್ಯ ಮಾತುಕತೆ ನಡೆಸಿದ್ರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿರೋ ಸಚ್ಚಿದಾನಂದ, ತಮ್ಗೆ ಟಿಕೇಟ್​ ನೀಡಬೇಕು ಎಂಬ ಮನವಿಯನ್ನೂ ಮಾಡಿದ್ರು. ಮತ್ತೊಂದೆಡೆ ಜೆಡಿಎಸ್ ರೆಬೆಲ್ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಟಿಕೇಟ್ ಸಿಗೋ ಸಾಧ್ಯತೆ ಹೆಚ್ಚಾಗಿದ್ದು, ಇದ್ರ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ಹಲವು ಕುತೂಹಲಕ್ಕೆ ಕಾರಣವಾಗಿದೆ.

 

ಹಾಗಾಗಿ ಇಂದು ಅಭಿಮಾನಿಗಳ ಜೊತೆ ಜೊತೆಗೆ ಸಚ್ಚಿ ಕೂಡ ತಮ್ಮ ಶಕ್ತಿ ಪ್ರದರ್ಶನವನ್ನು ಸಚಿವರ ಮುಂದೆ ಪ್ರದರ್ಶನ ಮಾಡಿದ್ರು. ಇದಕ್ಕೂ ಮುನ್ನ ಹೆಲಿಕಾಪ್ಟರ್​ ಮೂಲಕ ತೂಬಿನಕೆರೆ ಹೆಲಿಪ್ಯಾಡ್​ಗೆ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್​ಗೆ ಜಿಲ್ಲೆಯ ಕಾಂಗ್ರೆಸ್​ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದ್ರು.
ಸಚ್ಚಿದಾನಂದ ಮನೆಯಲ್ಲಿ ಊಟ ಸವಿದು, ಶ್ರೀರಂಗಪಟ್ಟಣದ ಕಡೆ ಪ್ರಯಾಣ ಬೆಳೆಸಿದ ಸಚಿವಅಲ್ಲಿ ಮತ್ತೊಬ್ಬ ಟಿಕೇಟ್ ಆಕಾಂಕ್ಷಿ ಪುಟ್ಟೇಗೌಡರ ಜೊತೆಯೂ ಮಾತುಕತೆ ನಡೆಸಿದ್ರು. ಅಲ್ದೆ ಕಾರ್ಯಕರ್ತರ ಸಭೆಯಲ್ಲೂ ಪಾಲ್ಗೊಂಡು, ಪಕ್ಷದ ನಿಲುವಿಗೆ ಬದ್ಧರಾಗುವಂತೆ ಮನವಿ ಮಾಡಿದ್ರು.

 

ಮತ್ತೊಂದೆಡೆ ಸಚ್ಚಿದಾನಂದ ಪಕ್ಷದ ನಿಲುವಿಗೆ ಬದ್ಧ ಎಂದರೂ, ಕಾರ್ಯಕರ್ತರ ಒತ್ತಡಕ್ಕೆ ಮಣಿಯೋ ಮಾತನ್ನಾಡಿದ್ರು. ಇನ್ನು ಸಚಿವರ ಈ ಪ್ರವಾಸ ಕಾಂಗ್ರೆಸ್ ಬಂಡಾಯಕ್ಕೆ ಔಷಧಿಯಾಗಲಿದೆ ಎಂಬ ಮಾತುಗಳು ಕೇಳಿ ಬಂಧಿವೆ. ಪಕ್ಷ ಯಾರಿಗೆ ಟಿಕೇಟ್ ನೀಡುತ್ತೋ ಅವ್ರಿಗೆ ಕೆಲ್ಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಎಲ್ಲವೂ ಎಐಸಿಸಿ ಮತ್ತು ಕೆಪಿಸಿಸಿ ತೀರ್ಮಾನವೇ ಅಂತಿಮ ಎಂಬ ಮಾತುಗಳು ಇವೆ.
-ಡಿ.ಶಶಿಕುಮಾರ್, ಬಿ-ಟಿವಿ ನ್ಯೂಸ್, ಮಂಡ್ಯ.