ಕೊಲೆ ಮಾಡಿದ್ದರಾ ಕುಣಿಗಲ್ ಕಾಂಗ್ರೆಸ್ ಶಾಸಕ ? ಸಾವನ್ನಪ್ಪಿದ ಅಮಾಯಕನ ಹೆತ್ತವರು ಹೇಳೋದ್ಯೇನು ?

ಕಾಂಗ್ರೆಸ್​ ಮಾಜಿ ಶಾಸಕರೊಬ್ಬರ ಪಾತಕ ಕೃತ್ಯವೊಂದು ಬೆಳಕಿಗೆ ಬಂದಿದೆ. 2018 ರಲ್ಲಿ ಶಾಸಕರಾಗಿದ್ದ ಅವರಿಂದಾಗಿ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

ಹೌದು ಇದು ಕಾಂಗ್ರೆಸ್ ನ ಮಾಜಿ ಶಾಸಕನೊಬ್ಬನ ಪಾತಕ ಕೃತ್ಯ. ತನ್ನನ್ನು ನಂಬಿದ ಅಮಾಯಕನೊಬ್ಬನನ್ನು ಆಸ್ತಿಗಾಗಿ ಮುಗಿಸಿ ಹೆಣವೂ ಸಿಗದಂತೆ ಮಾಡಿದ ಬೀಬತ್ಸ ಘಟನೆ ಇದು. ಈ ಕೊಲೆಯ ರುವಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಮಸ್ವಾಮಿ ಗೌಡ. 2008 ರಲ್ಲಿ ಶಾಸಕರಾಗಿದ್ದ ಬಿಬಿ ರಾಮಸ್ವಾಮಿ ಗೌಡ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ಗೌಡಾಸ್ ಎಂಬ ಪೆಟ್ರೋಲ್ ಪಂಪ್ ಹೊಂದಿದ್ದರು. ಈ ಗೌಡಾಸ್ ಎಂಬ ಪೆಟ್ರೋಲ್ ಪಂಪ್ ಈ ಕೊಲೆಗೆ ಮೂಲ ಕಾರಣ. 2008 ರಲ್ಲಿ ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಬಳಲಿದ ಶಾಸಕ ಬಿ ಬಿ ರಾಮಸ್ವಾಮಿ ಗೌಡರು ಶಶಿಕುಮಾರ್ ಎಂಬ ಯುವ ಉದ್ಯಮಿಗೆ ಪೆಟ್ರೋಲ್ ಪಂಪ್ ಮಾರಾಟ ಮಾಡುತ್ತಾರೆ. ಎಂಟು ಕೋಟಿಗೆ ಗೌಡಾಸ್ ಪೆಟ್ರೋಲ್ ಪಂಪ್ ಮಾರಾಟವಾಗುತ್ತದೆ.

ಅದಕ್ಕಾಗಿ ಒಂದು ಕೋಟಿ ಕ್ಯಾಶ್ ಅನ್ನು ಶಶಿಕುಮಾರ್ ಅಡ್ವಾನ್ಸ್ ಆಗಿ ಶಾಸಕ ಬಿಬಿ ರಾಮಸ್ವಾಮಿ ಗೌಡರಿಗೆ ನೀಡುತ್ತಾರೆ. ಉಳಿದ ಏಳು ಕೋಟಿಯ ಚೆಕ್ ಅನ್ನು ಶಶಿಕುಮಾರ್ ರಾಮಸ್ವಾಮಿ ಗೌಡರಿಗೆ ನೀಡಿದ್ದರು. ಗೌಡಾಸ್ ಪೆಟ್ರೋಲ್ ಪಂಪ್ ಅನ್ನು ಶಶಿಕುಮಾರ್ ಹೆಸರಿಗೆ ರಿಜಿಸ್ಟರ್ ಮಾಡಲಾಗುತ್ತದೆ. ವಿಜಯನಗರ ರಿಜಿಸ್ಟರ್ ಕಚೇರಿಯಲ್ಲಿ ಈ ಪ್ರಕ್ರಿಯೆ ಮಾಡಲಾಗುತ್ತದೆ. ಇದಾಗಿ ಕೆಲ ದಿನಗಳಲ್ಲಿ ಗೌಡಾಸ್ ಪೆಟ್ರೋಲ್ ಪಂಪ್ ಅನ್ನು ವಾಪಸ್ ಕೊಡುವಂತೆ ರಾಮಸ್ವಾಮಿ ಗೌಡರು ಶಶಿಕುಮಾರ್ ಗೆ ಒತ್ತಡ ಹಾಕುತ್ತಾರೆ. ಶಶಿಕುಮಾರ್ ಪೆಟ್ರೋಲ್ ಪಂಪ್ ಅನ್ನು ಮರಳಿ ನೀಡದೇ ಇದ್ದಾಗ ಪಿಸ್ತೂಲ್ ತೋರಿಸಿ ಅಪಹರಣ ಮಾಡಲಾಗುತ್ತದೆ. ಅಜ್ಞಾತ ಸ್ಥಳವೊಂದರಲ್ಲಿ ಇರಿಸಿ ಶಶಿಕುಮಾರ್ ಗೆ ಚಿತ್ರ ಹಿಂಸೆ ನೀಡಲಾಗುತ್ತದೆ. ಡಾಕ್ಯುಮೆಂಟ್ ತರಲೆಂದು ಶಶಿಕುಮಾರ್ ನನ್ನು ಶಾಸಕ ರಾಮಸ್ವಾಮಿ ಕಾರಲ್ಲಿ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಎಂಪಾಯರ್ ಹೊಟೇಲ್ ನಲ್ಲಿ ಜ್ಯೂಸ್ ಕುಡಿಯುತ್ತಾರೆ.

ಆ ಜ್ಯೂಸಿನಲ್ಲಿ ರಾಮಸ್ವಾಮಿ ಗೌಡ ವಿಷ ಹಾಕಿದ್ದರು. ವಿಷಯುಕ್ತ ಜ್ಯೂಸ್ ಕುಡಿದ ಶಶಿಕುಮಾರ್, ಎಂಪಾಯರ್ ಹೊಟೇಲ್ ನಲ್ಲಿ ಒದ್ದಾಡಿದಾಗ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಶಿಕುಮಾರ್ ಮೃತಪಟ್ಟರು. ಮಗ ಶಶಿಕುಮಾರ್ ಮೃತಪಟ್ಟ ವಿಚಾರ ತಿಳಿದುಆಸ್ಪತ್ರೆಗೆಬಂದ ತಾಯಿ ಕಮಲಮ್ಮ ಮತ್ತು ತಂದೆ ರಾಮಕೃಷ್ಣಪ್ಪಗೆ ಹೆಣ ನೋಡಲೂ ಅವಕಾಶ ನೀಡಲಿಲ್ಲ. ಶಾಸಕ ರಾಮಸ್ವಾಮಿ ಗೌಡ ಪ್ರಭಾವದಿಂದ ಈ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂಬುದು ಶಶಿಕುಮಾರ್ ಪೋಷಕರ ಆರೋಪ.