ಮೋದಿಯನ್ನು ಕರ್ನಾಟಕಕ್ಕೆ ಬರಲು ಬಿಡಬೇಡಿ !! ಯುವಜನತೆಗೆ ಗಾಂಧಿವಾದಿ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮನವಿ !!

Freedom fighter HS Doreswamy Statement About PM Modi.

“ಏನಾದರೂ ಆಗಲಿ. ನರೇಂದ್ರ ಮೋದಿ ಕರ್ನಾಟಕಕ್ಕೆ ಬರದಂತೆ ನೋಡಿಕೊಳ್ಳಿ”

ad

 

 

ಹೀಗಂತ ಯುವಜನರನ್ನು ಮನವಿ ಮಾಡಿರೋದು ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್ ಎಸ್ ದೊರೆಸ್ವಾಮಿ ! ಇಂದು ಪುರಭವನದಲ್ಲಿ ನಡೆದ ಗೌರಿ ದಿನ ಕಾರ್ಯಕ್ರಮದಲ್ಲಿ ಎಚ್ ಎಸ್ ದೊರೆಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.‌ ಗೌರಿ ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿದ್ದರು. ‌ಜನವಿರೋಧಿ ಕೆಲಸಗಳು ಎಲ್ಲೇ ನಡೆದ್ರು ವಿರೋಧಿಸುತ್ತಿದ್ದಳು. ಅಂತವರನ್ನು ಕೊಲೆ ಮಾಡಿದ್ರು. ಕೊಲೆಗಾರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರಬಹುದು ಅನ್ನಿಸುತ್ತದೆ. ಪೊಲೀಸರು ಆ ಕಡೆ ಸ್ವಲ್ಪ ಕಣ್ಣಿಡಬೇಕು ಎಂದರು.

 

 

 

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರದಂತೆ ನೋಡಿಕೊಳ್ಳಬೇಕು. ನಾನು ಯಾವುದೇ ಪಕ್ಷದ ಪರ ಅಲ್ಲ. ಎಲ್ಲಾ ಪಕ್ಷಗಳಲ್ಲೂ ಭ್ರಷ್ಟರು ಇದ್ದಾರೆ. ಆದರೆ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದರೆ ಸೌಹಾರ್ದತೆ ಹಾಳಾಗುತ್ತೆ. ಈಗ ನಮ್ಮ ಯುವ ಜನತೆ ಬದ್ದತೆ ತೋರಿಸಬೇಕು. ಕೇವಲ ನನ್ನ ಮಾತಿಗೆ ಶಿಳ್ಳೆ ಹೊಡೆಯುವುದಲ್ಲ. ನರೇಂದ್ರ ಮೋದಿ ಕರ್ನಾಟಕಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದರು.