ಗೌರಿ ಲಂಕೇಶ್ ಕೊಲೆಯಲ್ಲಿ ಸನಾತನ ಸಂಸ್ಥೆ !! “ಧರ್ಮಸಭಾ” ರೂವಾರಿ ಹಂತಕ ?!!

Gauri Lankesh: some information available in investigation about plot to murder

ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ವಿಚಾರವಾದಿ ಗೌರಿ ಲಂಕೇಶ್ ಕೊಲೆ ಆರೋಪಿಗಳ ಪೈಕಿ ಕೆ.ಟಿ.ನವೀನ್​​ ಮೇಲಿನ ಆರೋಪ ಬಹುತೇಕ ಸಾಬೀತು ಆಗುತ್ತಿದೆ.

adಕೊಲೆಗೆ ಸಂಚು ರೂಪಿಸಿದ ಬಗ್ಗೆ ಎಸ್ ಐಟಿ ತನಿಖೆಯಲ್ಲಿ ಕೆಲ ಮಾಹಿತಿ ಲಭ್ಯವಾಗಿದ್ದು ನವೀನ್​​​ ಪಾತ್ರ ಬಹುತೇಕ ಖಚಿತಗೊಂಡ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಫ್​ಐಆರ್ ದಾಖಲಿಸಲಾಗಿದೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ತನಿಖೆ ನಡೆಸುತ್ತಿರುವ ಎಸ್​ಐಟಿ, ಇಂದು ಕೋರ್ಟ್​ಗೆ ಆರೋಪಿ ಕೆ.ನವೀನ್​​​ ಹಾಜರುಪಡಿಸಲಾಗಿದೆ.ನ್ಯಾಯಾಧೀಶರು ಮುಂದಿನ ಶುಕ್ರವಾರದವರೆಗೂ ಆರೋಪಿ ಕೆ ಟಿ ನವೀನನ್ನು ಎಸ್​ಐಟಿ ವಶಕ್ಕೆ ನೀಡಿದ್ದಾರೆ.

ಕೆ.ಟಿ.ನವೀನ್​​ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ. ಮಹಾರಾಷ್ಟ್ರದ ಸನಾತನ ಸಂಸ್ಥೆಯ ಅಂಗ ಸಂಸ್ಥೆ ಜತೆ ನವೀನ್​​ ಲಿಂಕ್ ಇರೋದನ್ನು ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ವಿಚಾರವಾದಿಗಳಾಗಿದ್ದ ದಾಬೋಲ್ಕರ್​​, ಗೋವಿಂದ ಪನ್ಸಾರೆ ಹತ್ಯೆ ಆರೋಪ ಹೊತ್ತಿರುವ ಸನಾತನ ಸಂಸ್ಥೆ ಇದೀಗ ಗೌರಿ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತುಕೊಳ್ಳಬೇಕಿದೆ.

ಸನಾತನ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಹಿಂದೂ ಜನ ಜಾಗೃತಿ ಸಮಿತಿಯ ‘ಧರ್ಮ ಸಭಾ’ ಕಾರ್ಯಕ್ರಮ ಏರ್ಪಡಿಸುವಲ್ಲಿ ನವೀನ್ ಪ್ರಮುಖ ಪಾತ್ರ ವಹಿಸಿದ್ದ. 2017ರ ಡಿಸೆಂಬರ್​​​ 20ರಂದು ನಡೆದಿದ್ದ ಧರ್ಮ ಸಭಾ ಮೀಟಿಂಗ್​​ ನಲ್ಲಿ ಹಿಂದೂ ಧರ್ಮದ ವಿರುದ್ದ ಮಾತನಾಡುವ ಸಾಹಿತಿಗಳ ಬಗ್ಗೆ ಚರ್ಚೆಯಾಗಿತ್ತು ಎಂದು ಆತ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.