ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಸರ್ಕಾರ ಅಸ್ತು. ಲಿಂಗಾಯಿತರು ಇನ್ಮುಂದೆ ಧಾರ್ಮಿಕ ಅಲ್ಪಸಂಖ್ಯಾತರು.

ಅಂತೂ ಸಿದ್ದರಾಮಯ್ಯ ಸರ್ಕಾರ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಒಪ್ಪಿಗೆ ನೀಡಿದೆ. ಧರ್ಮ ವಿಚಾರವನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಿದೆ.

ad


ಬಸವಣ್ಣ ತತ್ವವನ್ನ ಒಪ್ಪಿ ಯಾರೂ ಬೇಕಾದರೂ ಲಿಂಗಾಯಿತ ಧರ್ಮ ಸೇರಿಕೊಳ್ಳಬಹುದು ಅಂತ ಹೇಳಲಾಗಿದೆ. ಲಿಂಗಾಯಿತರನ್ನು ಧಾರ್ಮಿಕ ಅಲ್ಪಸಂಖ್ಯಾರು ಎಂದು ಪರಿಗಣಿಸಲಾಗಿದೆ.

ಹೌದು. ಇಂದು ನಡೆದ ಸಂಪುಟ ಸಭೆಯಲ್ಲಿ ಹಲವು ವಾದ ವಿವಾದಗಳ ನಡುವೆ ನ್ಯಾ. ನಾಗಮೋಹನ್​ದಾಸ್ ವರದಿ ಅಂಗೀಕರಿಸಿದ  ಸಿದ್ದರಾಮಯ್ಯ ಸರಕಾರ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.   ಅಂತೂ ಲಿಂಗಾಯಿತ ಧರ್ಮದ ಬೇಡಿಕೆಯಿಟ್ಟ ಸ್ವಾಮೀಜಿಗಳ ಒತ್ತಡಕ್ಕೆ ಸಿದ್ದು ಸರಕಾರ ಶರಣಾಗಿದೆ.