ರಾಹುಲ್ ರ‌್ಯಾಲಿ ಬಳಿಯೇ ರ‌್ಯಾಲಿ ಮಾಡಲಿದ್ದಾರೆ ಮೋದಿ !! ಇದು ಗುಜರಾತ್ ಸಂಘರ್ಷ !!

Gujarat Conflict: PM Modi, Rahul Gandhi launch rally blitz as election campaign.
Gujarat Conflict: PM Modi, Rahul Gandhi launch rally blitz as election campaign.

ಇವತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿ ರ‌್ಯಾಲಿ ಮಾಡುತ್ತಾರೋ ನಾಳೆ ಅದೇ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ರ‌್ಯಾಲಿ ಮಾಡುತ್ತಾರೆ. ಇವತ್ತು ರಾಹುಲ್ ಮಾಡಿದ ಆರೋಪಗಳಿಗೆ ನಾಳೆ ಅದೇ ಪ್ರದೇಶದಲ್ಲಿ ಅದೇ ಜನಗಳಿಗೆ ಮೋದಿ ಉತ್ತರ ಕೊಡಲಿದ್ದಾರೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಅನ್ನುವಂತಾಗಿದೆ ಗುಜರಾತ್ ಚುನಾವಣಾ ಅಖಾಡ !

ಹೌದು. ಗುಜರಾತ್ ಚುನಾವಣಾ ಕಣ ಕಾವೇರುತ್ತಿದೆ. ಡಿಸೆಂಬರ್ 9 ಕ್ಕೆ ಮೊದಲ ಹಂತದ ಚುನಾವಣೆ ನಡೆಯುವುದರಿಂದ ಮೊದಲ ಹಂತದ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ರ‌್ಯಾಲಿಗಳು ಪ್ರಾರಂಭಗೊಂಡಿದೆ.

 

ಇಂದು ಒಂದೇ ದಿನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಲ್ಕು ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕಚ್, ಸುರೇಂದ್ರನಗರ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದಾರೆ.

ಸುರೇಂದ್ರನಗರದ ಧರಂಗದರ ಎಂಬ ಪ್ರದೇಶದಲ್ಲಿ ಇಂದು ರಾಹುಲ್ ರ‌್ಯಾಲಿ ನಡೆಸಿದ್ರೆ, ರ‌್ಯಾಲಿಯ ಕೆಲವೇ ಕಿಮಿ ಅಂತರದಲ್ಲಿರುವ ದಂದೂಕ ಎಂಬ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ರ‌್ಯಾಲಿ ನಡೆಸಲಿದ್ದಾರೆ.

 

ಇದೊಂಥರ ರಾಜಕೀಯ ನಾಯಕರ ಜುಗಲ್ ಬಂದಿಯಂತೆ ಚುನಾವಣಾ ಪ್ರಚಾರ ನಡೆಯುತ್ತಿದೆ. ಯಾವ ಪ್ರದೇಶದಲ್ಲಿ ಪ್ರತಿಪಕ್ಷದ ನಾಯಕ ಆರೋಪ ಮಾಡಿದ್ದಾನೋ ಅದೇ ಜಾಗದಲ್ಲಿ ಅದೇ ಜನರಿಗೆ ಉತ್ತರ ನೀಡಲು ಬಿಜೆಪಿ ನಿರ್ಧರಿಸಿದಂತಿದೆ.

ನಾಳೆಯಿಂದ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಕಾಲ ಗುಜರಾತ್ ನಲ್ಲೇ ಇರೋ ಸಾದ್ಯತೆ ಇದೆ. ನಾಳೆ ಒಂದೇ ದಿನ ನಾಲ್ಕು ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡಲಿರೋ ಮೋದಿ ಕೊನೇ ಕ್ಷಣದ ಕಸರತ್ತುಗಳನ್ನು ನಡೆಸಲಿದ್ದಾರೆ.

 

ಮತ್ತೊಂದು ಕಡೆ ಪಟೇಲ್ ಸಮುದಾಯದ ನಾಯಕ ಹಾರ್ಧಿಕ್ ಪಟೇಲ್ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಲಕ್ಷಾಂತರ ಜನ ಸೇರುವ ಹಾರ್ದಿಕ್ ಪಟೇಲ್ ಸಮಾವೇಶ ಬಿಜೆಪಿ ಪಾಲಿಗೆ ಸವಾಲಾಗಿದೆ. ಹಾಗಿದ್ರೂ ಪ್ರಧಾನಿಯ ತವರೂರು ಎಂಬುದು ಗುಜರಾತ್ ಜನರಿಗೆ ಭಾವನಾತ್ಮಕ ವಿಚಾರವಾಗಿರುವುದು ಬಿಜೆಪಿ ಪಾಲಿಗೆ ಲಾಭವಾಗಲಿದೆ.