ಸಿಎಂ ಸಿದ್ದರಾಮಯ್ಯಗೆ ಗುಜರಾತ್ ಭಯ !! ಪ್ರಚಾರಕ್ಕೆ ಹೋಗದಿರಲು ನಿರ್ಧಾರ !!

Gujarat Publicity: High Command noticefully rejected by CM.
Gujarat Publicity: High Command noticefully rejected by CM.

ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಗುಜರಾತ್ ಚುನಾವಣಾ ಪ್ರಚಾರಕ್ಕೆ ತೆರಳಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದರೂ ಸಿದ್ದರಾಮಯ್ಯ ನಯವಾಗಿ ನಿರಾಕರಿಸಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಹವಾ ಪ್ರಾರಂಭವಾಗಿರೋದ್ರಿಂದ ಗುಜರಾತ್ ಪ್ರವಾಸ ಸಾದ್ಯವಾಗಲ್ಲ ಎಂದು ಹೈಕಮಾಂಡ್ ಗೆ ಸಿಎಂ ಸಿದ್ದರಾಮಯ್ಯ ಮನವರಿಕೆ ಮಾಡಿದ್ದಾರೆ. ವಾಸ್ತವವಾಗಿ ಸಿದ್ದರಾಮಯ್ಯ ಗುಜರಾತ್ ಚುನಾವಣಾ ಪ್ರಚಾರ ನಿರಾಕರಿಸಲು ಬೇರೆಯದ್ದೇ ಕಾರಣಗಳಿವೆ.

ಹೌದು. ಸಿಎಂ ಸಿದ್ದರಾಮಯ್ಯ ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಮಾಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಬಹುದಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾಗೆ ಅವರ ನೆಲದಲ್ಲೇ ಹೋಗಿ ದಾಳಿ ಮಾಡಬಹುದಿತ್ತು. ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುವ ಮೂಲಕ ರಾಷ್ಟ್ರರಾಜಕಾರಣದಲ್ಲಿ ಕಾಣಿಸಿಕೊಳ್ಳಬಹುದಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅಂತಹ ಅವಕಾಶ ಮನೆಬಾಗಿಲಿಗೆ ಬಂದರೂ ಕಳೆದುಕೊಂಡಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬುದ್ದಿವಂತಿಕೆಯ ನಡೆಯಿದೆ.

Gujarat Publicity: High Command noticefully rejected by CM.
Gujarat Publicity: High Command noticefully rejected by CM.

ಸಿದ್ದರಾಮಯ್ಯ ಪ್ರಚಾರಕ್ಕೆ ಹೋದ ನಂತರವೂ ಗುಜರಾತ್ ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೆ ಪ್ರಚಾರಕ್ಕೆ ತೆರಳಿದ ಸಿದ್ದರಾಮಯ್ಯ ವರ್ಚಸ್ಸೂ ಕಡಿಮೆಯಾಗುತ್ತದೆ. ಅದು ರಾಜ್ಯದ ಚುನಾವಣೆಯ ವೇಳೆ ನೇರ ಪರಿಣಾಮ ಬೀರುತ್ತದೆ.

Gujarat Publicity: High Command noticefully rejected by CM.
Gujarat Publicity: High Command noticefully rejected by CM.

ಗುಜರಾತ್ ಪ್ರಧಾನಿ ನರೇಂದ್ರ ಮೋದಿಯ ಪ್ರತಿಷ್ಟೆಯ ಚುನಾವಣೆ. ಅಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸುವುದು  ರಾಷ್ಟ್ರಮಟ್ಟದಲ್ಲಿ ಬಿಜೆಪಿಯು ಸಿಎಂ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿಕೊಳ್ಳುವಂತೆ ಮಾಡುತ್ತದೆ. ನೇರವಾಗಿ ಪ್ರಧಾನಿ ಮೋದಿಯ ಟಾರ್ಗೆಟ್ ಗೆ ಒಳಗಾಗಬೇಕಾಗುತ್ತದೆ. ಇದೆಲ್ಲವೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋದ್ರಿಂದ ಚುನಾವಣಾ ಸಂಧರ್ಭದಲ್ಲಿ ಅಂತಹ ರಿಸ್ಕ್ ಯಾಕೆ ? ಎಂದು  ಸಿಎಂ ಸಿದ್ದರಾಮಯ್ಯ ಗುಜರಾತ್ ನಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ

Watch Here: https://youtu.be/Y6Fp57SKsYA