ಹ್ಯಾರೀಸ್ ಗೆ ಟಿಕೇಟ್​ ಕೊಡುವಂತೆ ಒತ್ತಾಯ- ಶಾಂತಿನಗರ ಕಾಂಗ್ರೆಸ್​ ಮುಖಂಡರಿಂದ ಪರಮೇಶ್ವರ್​ ಗೆ ಒತ್ತಾಯ!

ವಿದ್ವತ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಳಪಾಡ್​ ಪ್ರಕರಣದ ಬಳಿಕ ಈ ಭಾರಿ ಶಾಂತಿನಗರ ಕ್ಷೇತ್ರದಿಂದ ಎನ್.ಎ.ಹ್ಯಾರಿಸ್​ಗೆ ಟಿಕೆಟ್​ ಕೊಡುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭೇಟಿ ಮನವಿ ಸಲ್ಲಿಸಿದರು.

ವಿದ್ವತ್​ ಘಟನೆಗೂ ಎನ್​.ಎ. ಹ್ಯಾರೀಸ್​ಗೂ ಯಾವುದೇ ಸಂಬಂಧವಿಲ್ಲ. ಕಳೆದ 10 ವರ್ಷದಲ್ಲಿ ಹ್ಯಾರೀಸ್​ ಶಾಂತಿನಗರ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೇ ವಿದ್ವತ್​​ ಮೇಲಿನ ಹಲ್ಲೆ ಪ್ರಕರಣದ ಬಳಿಕ ಹ್ಯಾರೀಸ್​​ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಹ್ಯಾರೀಸ್​​ಗೆ ಟಿಕೇಟ್​ ನೀಡದೇ ಹೋದರೇ ಇತರೇ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಹಿನ್ನಡೆ ಆಗುತ್ತೆ. ಒಂದೊಮ್ಮೆ ಹ್ಯಾರೀಸ್​​ ಟಿಕೇಟ್​ ಕೊಡದೇ ಹೋದಲ್ಲಿ ನಾವೆಲ್ಲ ಕಾಂಗ್ರೆಸ್​ ಪಕ್ಷದ ಪರ ಕೆಲಸ ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರಿಗೆ ಶಾಂತಿನಗರ ಭಾಗದ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ. ಇನ್ನು ಕಾಂಗ್ರೆಸ್​ ಮೊದಲ ಪಟ್ಟಿಯೂ ಪ್ರಕಟವಾಗಿಲ್ಲ. ಹೀಗಾಗಿ ಹ್ಯಾರೀಸ್​​ಗೆ ಟಿಕೇಟ್​​ ಕೊಡ್ತಾರಾ ಅನ್ನೋದು ಸಧ್ಯದ ಕುತೂಹಲ.