ಜಾತ್ರೆಯ ನೂಕುನುಗ್ಗಲಿನಲ್ಲಿ ಸಿಲುಕಿದ ಮಾಜಿಪ್ರಧಾನಿ ದಂಪತಿ- ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ!

Hassan: HD Devegowda & wife stucked while pulling chariot - HDD reacts
Hassan: HD Devegowda & wife stucked while pulling chariot - HDD reacts

ಮಾಜಿ ಪ್ರಧಾನಿ ದೇವೆಗೌಡರಿಗೆ ಎಷ್ಟೇ ವಯಸ್ಸಾಗಿದ್ದರೂ ದೇವರ ಕಾರ್ಯಗಳಲ್ಲಿ ಸದಾ ಮುಂದಿರುತ್ತಾರೆ.

ad

ಹೀಗೆ ಹಾಸನ ಜಿಲ್ಲೆ ಹೊಳೆನರಸೀಪುರ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡ್ರು ಕೆಲಕಾಲ ಸಂಕಷ್ಟಕ್ಕೆ ಸಿಲುಕಿದ್ದು, ಸಾರ್ವಜನಿಕರು ಸೇರಿ ಎಲ್ಲರೂ ಕಂಗಾಲಾದ ಘಟನೆ ನಡೆಯಿತು.
ಹಾಸನ ಜಿಲ್ಲೆ ಹೊಳೆನರಸೀಪುರ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವಕ್ಕೆ ಮಾಜಿ ಪ್ರಧಾನಿ ದೇವೆಗೌಡರು ಪತ್ನಿ ಚನ್ನಮ್ಮ, ಪುತ್ರ ಎಚ್​.ಡಿ.ರೇವಣ್ಣ, ಸೊಸೆ ಭವಾನಿ ರೇವಣ್ಣ, ಡಾ ಸೂರಜ್​​ ಸೇರಿ ಹಲವರ ಜೊತೆ ವಿಶೇಷ ಪೂಜೆಗೆ ಆಗಮಿಸಿದ್ದರು.

 

 

ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ರಿಂದ ಏಕಾಏಕಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಭಕ್ತರು ರಥ ಎಳೆದಿದ್ದು, ಇದರಿಂದ ದೇವೆಗೌಡರು, ಪತ್ನಿ ಚೆನ್ನಮ್ಮ ನೂಕುನುಗ್ಗಲಿನಲ್ಲಿ ಸಿಲುಕಿಕೊಂಡರು. ಇದರಿಂದ ಕೆಲಕಾಲ ಭಾರಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತ ಅಂಗರಕ್ಷಕರು ದೇವೆಗೌಡರ ಸಹಾಯಕ್ಕೆ ಧಾವಿಸಿದ್ದು, ಜನರಿಂದ ರಕ್ಷಿಸಿ ಪಕ್ಕಕ್ಕೆ ಕರೆತಂದರು. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನೂಕುನುಗ್ಗಲು ಉಂಟಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೆಗೌಡರು, ಮೊದಲು ತಮ್ಮ ಪತ್ನಿಯನ್ನು ರಕ್ಷಿಸಲು ಮುಂಧಾಗಿದ್ದು, ಗಮನ ಸೆಳೆಯಿತು.