ಸ್ವಚ್ಛ ಸರ್ಕಾರ ನನ್ನ ಕನಸು- ಹಾಸನದಲ್ಲಿ ಉಪೇಂದ್ರ ಹೇಳಿಕೆ!!

Hassan: Actor . KPJP President Upendra Reacts to Media.
Hassan: Actor . KPJP President Upendra Reacts to Media.

ಹೊಸ ರಾಜಕೀಯ ಪಕ್ಷದೊಂದಿಗೆ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗಿರುವ ನಟ-ನಿರ್ದೇಶಕ ಹಾಗೂ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ ಸ್ವಚ್ಛ ಸರ್ಕಾರ ಬರಬೇಕು ಎಂಬುದು ನನ್ನ ಉದ್ದೇಶ. ನನ್ನ ಭವಿಷ್ಯದ ಕನಸುಗಳೇನು ಎಂಬುದನ್ನು ಪ್ರಣಾಳಿಕೆಯಲ್ಲಿ ವಿವರಿಸುತ್ತೇನೆ ಎಂದಿದ್ದಾರೆ.

ad

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ಸಮಾಜಕ್ಕೆ ಏನಾದ್ರೂ ಸೇವೆ ಮಾಡಬೇಕು ಎಂಬ ಗುರಿಯಿಟ್ಟುಕೊಂಡು ಪ್ರಜಾಕೀಯ ಮಾಡಿದ್ದೇನೆ. ಸ್ವಚ್ಛ ಸರ್ಕಾರ ಬರಬೇಕು ಎಂಬುದಷ್ಟೇ ನನ್ನ ಉದ್ದೇಶ. ಒಂದು ರೂಪಾಯಿ ಕೂಡ ಹಣ ಪೋಲಾಗಬಾರದು. ಕೇವಲ ಸಂಬಳಕ್ಕೆ ಕೆಲಸ ಮಾಡೋ ವ್ಯವಸ್ಥೆ ನಿರ್ಮಾಣವಾಗಬೇಕು.

ನನಗೆ ಪ್ರಜ್ಞಾವಂತರು, ವಿದ್ಯಾವಂತರ ಮತ ಸಾಕು, ಭ್ರಷ್ಟರು, ಮೂರ್ಖರ ಓಟು ಬೇಡ. ಅಂಥ ಓಟಿಗಾಗಿ ನಾನು ಭಿಕ್ಷೆ ಬೇಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ದಿನಗಳಲ್ಲಿ ನಾಡಿನ ಜನರ ಬುದ್ಧಿಮತ್ತೆ ಏನು? ಪ್ರಾಮಾಣಿಕತೆ ಏನು ಎಂಬುದನ್ನು ದೇಶಕ್ಕೆ ತೋರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಉಪೇಂದ್ರ, ಜನಸೇವೆ ಜೊತೆಗೆ ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಮಾತ್ರ ನಮ್ಮ ಪಕ್ಷದಲ್ಲಿ ಅವಕಾಶ ಎಂದರು. ಇದೇ ವೇಳೆ ಉಪೇಂದ್ರ ಸಿನಿಮಾದಿಂದ ನಿವೃತ್ತಿ ಪಡೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ಸದ್ಯಕ್ಕೆ ಪ್ರಜಾಕೀಯದಲ್ಲಿ ಸ್ವಲ್ಪ ಬ್ಯುಸಿಯಾಗಿದ್ದೇನೆ. ಇದರ ಜೊತೆಯಲ್ಲೇ ನಟನೆ, ನಿರ್ದೇಶನ ಮುಂದುವರಿಸುತ್ತೇನೆ. ಸಿನಿಮಾ ಬಿಡುವ ಪ್ರಶ್ನೆಯೇ ಇಲ್ಲ ಎಂದರು.