ಪ್ರಜ್ವಲ್ ಗೆ ಸಿಗುತ್ತಾ ಆರ್.ಆರ್.ನಗರ ಟಿಕೇಟ್- ಮೈಸೂರಿನಲ್ಲಿ ಎಚ್ ಡಿಕೆ ನೀಡಿದ ಮುನ್ಸೂಚನೆ ಏನು?

HD Kumarswamy Gave Clues About Prajwal Revanna.

ರಾಜ್ಯದಲ್ಲಿ ಚುನಾವಣೆ ಸಿದ್ಧತೆ ಆರಂಭವಾದಾಗಿನಿಂದಲೂ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುವುದು ಎನ್ನುತ್ತಲೇ ಬಂದಿದ್ದರು.

ಆದರೇ ಸಾರ್ವಜನಿಕವಾಗಿ ದೇವೆಗೌಡರ್​ ಕುಟುಂಬದ ಕುಡಿ ಪ್ರಜ್ವಲ ರೇವಣ್ಣ ಸ್ಪರ್ಧಿಸಬೇಕೆಂಬ ಆಗ್ರಹ ಕೇಳಿಬರುತ್ತಲೇ ಇತ್ತು. ಇದೀಗ ಸ್ವತಃ ಕುಮಾರಸ್ವಾಮಿಯವರೇ ಈ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಹೌದು ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಟಿಕೆಟ್ ಬೇಕು ಅಂತ ಅಪೇಕ್ಷೆ ಪಡೋದರಲ್ಲಿ ತಪ್ಪೇನಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಇನ್ನು ಅಭ್ಯರ್ಥಿ ಫೈನಲ್ ಆಗಿಲ್ಲ.ಹಾಗಾಗಿ ಅವರು ಟಿಕೆಟ್ ಕೇಳುತ್ತಿದ್ದಾರೆ. ಆ ಬಗ್ಗೆ ಪಕ್ಷದ ಒಳಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.ಪಕ್ಷದಲ್ಲಿ ಯಾರು ಬೇಕಾದರೂ ಟಿಕೆಟ್ ಕೇಳಬಹುದು.ಅವರಿಗೆ ಗೆಲ್ಲುವ ಸಾಮರ್ಥ್ಯವಿದ್ದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಟಿಕೆಟ್ ವಿಚಾರದಲ್ಲಿ ಕಾಲ ನಿರ್ಧಾರ ಮಾಡಲಿದೆ ಎಂದರು.

 

ಆದರೇ ಸದಾಕಾಲ ಸಭೆ-ಸಮಾರಂಭದಲ್ಲಿ ನಮ್ಮ ಪಕ್ಷದಿಂದ ಇಬ್ಬರೇ ಸ್ಪರ್ಧಿಸುತ್ತಾರೆ ಎನ್ನುತ್ತಲೇ ಬಂದಿದ್ದ ಕುಮಾರಸ್ವಾಮಿಯವರು ಇದೀಗ ಟಿಕೆಟ್​ ವಿಚಾರ ಕಾಲವೇ ನಿರ್ಧರಿಸಲಿದೆ ಎಂದಿರೋದು ಪ್ರಜ್ವಲ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಮನ್ಸೂಚನೆ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಪ್ರಜ್ವಲ್ ಪರ ಒಲವು ಕಂಡುಬಂದಿಲ್ಲದೇ ಪ್ರತಿಭಟನೆಗಳು ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಎದುರಿನಲ್ಲಿ ಬಂಡಾಯ ಎದುರಿಸುವಂತಾಗಬಾರದು ಎಂಬ ಕಾರಣಕ್ಕೆ ಪ್ರಜ್ವಲ್​​ ಗೆ ಟಿಕೆಟ್​​ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಗೌಡರ ಕುಟುಂಬ ರಾಜಕಾರಣದ ಮುನ್ಸೂಚನೆ ದೊರೆತಿದೆ.