ಆರೋಗ್ಯ ಸಚಿವರಿಗೇ ಅನಾರೋಗ್ಯ!!

ಅನಾರೋಗ್ಯಕ್ಕೊಳಗಾದ ರಮೇಶ್ ಕುಮಾರ್.. 

ಕಳೆದ ೫ ದಿನಗಳಿಂದ ಬೆಳಗಾವಿ ಅಧಿವೇಶನದಲ್ಲಿದ್ದ ಆರೋಗ್ಯಸಚಿವ ರಮೇಶ್ ಕುಮಾರ್ ಇಂದು ಕೋಲಾರದ ಶ್ರೀನಿವಾಸಪುರಕ್ಕೆ ಬಂದಿದ್ದರು.  ಡಿಸಿಸಿ ಬ್ಯಾಂಕ್ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಬರುವಾಗ ವಾಂತಿ ಮಾಡಿಕೊಳ್ಳಲಾರಂಭಿಸಿದರು. ತಕ್ಷಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಕಳೆದ ೫-೬ ದಿನದಿಂದ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಷನದ ಕೇಂದ್ರಬಿಂದುವಾಗಿದ್ದರು. KPME ಮಸೂದೆ ಮಂಡಿಸುವ ಕೆಲಸದಲ್ಲಿ ಒತ್ತಡಕ್ಕೆ ಒಳಗಾಗಿದ್ದರು. ಇಂದು ಸಮಾರಂಭ ಮುಗಿಸಿ ಹೊರಬರುವಾಗ ಅಸ್ವಸ್ಥಗೊಂಡ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.