ನಳಪಾಡ್​​ ಜೈಲೇ ಗತಿ- ಜಾಮೀನು ಅರ್ಜಿವಜಾಗೊಳಿಸಿದ ಹೈಕೋರ್ಟ್​​- ಬೇಲ್​ ರದ್ದಿಗೆ ಕಾರಣವಾಯ್ತಾ ಆ ವಿಡಿಯೋ?

High Court Dismissed Nalapad's bail Petition.
High Court Dismissed Nalapad's bail Petition.

ಸ್ನೇಹಿತ ವಿದ್ವತ್​ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹಲ್ಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ ತೀರ್ಪು ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಿಸಿದ ನ್ಯಾಯಾಲಯ ನಳಪಾಡ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.  ನಳಪಾಡ್​ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್​, ಇದು ಕೊಲೆ ಪ್ರಯತ್ನವಲ್ಲ. ಸಾಮಾನ್ಯ ಪ್ರಕರಣ ಎಂದು ವಾದ ಮಂಡಿಸಿದ್ದರು. ಆದರೇ ಈ ವೇಳೆ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು ಹಲ್ಲೆ ಮಾಡಿಲ್ಲ ಎಂಬ ವಾದ ಬಿಡಿ. ನಾನು ವಿಡಿಯೋ ನೋಡಿದ್ದೇನೆ ಎಂದಿದ್ದರು.

ಇನ್ನು ವಿದ್ವತ್ ಪರ ಸರ್ಕಾರಿ ವಿಶೇಷ ಅಭಿಯೋಜಕ ಶ್ಯಾಮಸುಂದರ ವಾದ ಮಂಡಿಸಿದ್ದರು. ಶ್ಯಾಮಸುಂದರ ನಡೆಸಿದ್ದ ವಾದ ಪುರಸ್ಕರಿಸಿದ ಹೈಕೋರ್ಟ್​​​ನ ನ್ಯಾಯಮೂರ್ತಿ ಹರೀಶ್​ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ಆರೋಪಿಗೆ ಜಾಮೀನು ನಿರಾಕರಿಸಿದೆ.
ಹೈಕೋರ್ಟ್​ ಆದೇಶದ ಬಳಿಕ ಮಾತನಾಡಿದ ವಿದ್ವತ್ ಪರ ವಕೀಲರಾದ ಶ್ಯಾಮಸುಂದರ್, ವಿದ್ವತ್ ಮೇಲೆ ಘೋರವಾಗಿ ಹಲ್ಲೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲು ತಡವಾಗಿರುವುದನ್ನು ಉಲ್ಲೇಖಿಸಿದ್ದಾರೆ. ಮಲ್ಯ ಆಸ್ಪತ್ರೆ ವೈದ್ಯ ಡಾಕ್ಟರ್ ಆನಂದ ನೀಡಿದ್ದ ಡಿಸ್ಚಾರ್ಜ್ ಸಾರಾಂಶವನ್ನು ನ್ಯಾಯಲಯ ಗಮನಿಸಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಮಹತ್ವದ ತೀರ್ಪನ್ನು ಘನ ನ್ಯಾಯಾಲಯ ನೀಡಿದೆ ಎಂದರು.