ಕೆಪಿಸಿಸಿ ಅಧ್ಯಕ್ಷರಿಗೇ ಬಿಜೆಪಿಯಿಂದ ಆಹ್ವಾನ !! ಇದೇ ಕೊನೇ ಅವಕಾಶವಂತೆ !!

ಕಾಂಗ್ರೆಸ್ ಪಕ್ಷದ ಮುಖಂಡರನ್ನು, ಶಾಸಕರನ್ನು ಅಪರೇಷನ್ ಕಮಲ ಮಾಡಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿರೋ ಪ್ರಕರಣಗಳನ್ನು ಬಹಳಷ್ಟು ನೋಡಿರುತ್ತೀರಿ. ಇದು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಾ ಜಿ ಪರಮೇಶ್ವರ್ ರನ್ನೇ ಬಿಜೆಪಿಗೆ ಆಹ್ವಾನಿಸಿರೋ ಸ್ಟೋರಿ !!

ಹೌದು. ಡಾ ಜಿ ಪರಮೇಶ್ವರ್ ಗೆ ಬಿಜೆಪಿಯಿಂದ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಇಂದು ಹಾಸನದಲ್ಲಿ ಬಹಿರಂಗವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದಾರೆ.

ಬಿಜೆಪಿಯಿಂದ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಡಾ ಜಿ ಪರಮೇಶ್ವರ್ ಹೇಳಿದ್ದರು. ಕಾಂಗ್ರೆಸ್ ಅನ್ನುವುದು ಮುಳುಗುತ್ತಿರೊ ಹಡಗು. ಅಂತಹ ಮುಳುಗುವ ಹಡಗಿಗೆ ಯಾರೂ ಹತ್ತುವುದಿಲ್ಲ ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಮುಳುಗುತ್ತಿರೋ ಹಡಗನ್ನು ಬಿಟ್ಟು ಕಾಂಗ್ರೆಸ್ ಅಧ್ಯಕ್ಷ ಡಾ ಜಿ ಪರಮೇಶ್ವರ್ ಬಿಜೆಪಿಗೆ ಬರಬೇಕು. ಅವರಿಗೆ ಬಹಿರಂಗವಾಗಿ ಆಹ್ವಾನ ನೀಡುತ್ತಿದ್ದೇನೆ. ಪರಮೇಶ್ವರ್ ಗೆ ಇದೇ ಕಡೇ ಆಹ್ವಾನ ಎಂದೂ ಸಿ ಟಿ ರವಿ ಹೇಳಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತುಗಳು ಕಾಂಗ್ರೆಸ್ ಗೆ ವ್ಯಂಗ್ಯ ಮಾಡಿದ್ದಾದರೂ ನಿರ್ಲಕ್ಷಿಸುವಂತಿಲ್ಲ. ಉಧ್ಯಮಗಳನ್ನು ಹೊಂದಿರುವ ಕಾಂಗ್ರೆಸ್ಸಿಗರನ್ನು ಐಟಿ ಇಲಾಖೆಯನ್ನು ಬಳಸಿಕೊಂಡು ಬಿಜೆಪಿಗೆ ಸೆಳೆಯಲಾಗ್ತಿದೆ. ಈ ಹಿನ್ನಲೆಯಲ್ಲೂ ಸಿ ಟಿ ರವಿ ಮಾತುಗಳು ಚರ್ಚೆಯಾಗುತ್ತಿದೆ