ನಡೆದಾಡುವ ದೇವರನ್ನು ಭೇಟಿಯಾಗಲಿರೋ ರಾಹುಲ್ ಗಾಂಧಿ !! ಸಿದ್ದಗಂಗಾಕ್ಕೆ ಕೈ ಅಧಿನಾಯಕ !!

Jana Ashirvad Yatra :Rahul Gandhi Visit to Tumkur.

ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸಿನ ಬಳಿಕ ಸಿಎಂ ಸಿದ್ಧರಾಮಯ್ಯ ಇಂದು ಮೊದಲ ಬಾರಿಗೆ ಸಿದ್ಧಗಂಗಾ ಮಠಕ್ಕೆ ಬೇಟಿ ಕೊಡಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತ್ರ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡುತ್ತಿರೋದು ಮಹತ್ವ ಪಡೆದುಕೊಂಡಿದೆ.ಇಂದು ತುಮಕೂರಿನಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್​​ ಮಧ್ಯಾಹ್ನ 2 ಗಂಟೆಗೆ ಆಗಮಿಸಿಲಿದ್ದು, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಜತೆ ಅರ್ಧಗಂಟೆ ಕಾಲ ಶ್ರೀಗಳ ಜತೆ ರಾಹುಲ್​ ಸಮಾಲೋಚನೆ ನಡೆಸಲಿದ್ದಾರೆ.

ಇನ್ನು ರಾಹುಲ್​ ಜೊತೆ ಸಿಎಂ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಿಕೆ ಶಿವಕುಮಾರ್ ಸಾಥ್ ನಿಡಲಿದ್ದಾರೆ.ನಂತರ ವಿಶೇಷ ಬಸ್ ಮುಖಾಂತರ ಕ್ಯಾತ್ಸಂದ್ರ ಕ್ಕೆ ಬಂದು ಸಾರ್ವಜನಿಕರ ಜೊತೆ 10 ನಿಮಿಷ ರಾಹುಲ್ ಗಾಂಧಿ ಮಾತನಾಡಿ, ನಂತರ ಕಾಂಗ್ರೆಸ್ ಕಚೇರಿಯಿಂದ ಟೌನ್ ಹಾಲ್ ವರೆಗೆ ರೋಡ್ ಶೋ ನಡೆಸಲಿದ್ದಾರೆ.