ಗಣಿ ರೆಡ್ಡಿಯನ್ನು ಬಂಧಿಸಿ, ನಷ್ಟ ವಸೂಲಿಗೆ ಸಂಪುಟ ಉಪಸಮಿತಿ ಶಿಫಾರಸ್ಸು !!

ಬೇಲೆಕೇರಿ ಬಂದರಿನಿಂದ ಆಕ್ರಮವಾಗಿ ಅದಿರು ರಪ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿಧಣಿ ಜನಾರ್ಧನ ರೆಡ್ಡಿ ಬಂಧನಕ್ಕೆ ಕ್ಯಾಬಿನೇಟ್​ ಸಬ್ ಕಮಿಟಿ ಅಸ್ತು ಎಂದಿದ್ದು, ಎಲ್ಲ ಅಂದುಕೊಂಡಂತೆ ನಡೆದಲ್ಲಿ ಮುಂದಿನ ವಾರದ ಅಂತ್ಯದಲ್ಲಿ ಗಣಿಧಣಿ ಜನಾರ್ಧನ್ ರೆಡ್ಡಿ ಪರಪ್ಪನ ಅಗ್ರಹಾರದ ಅತಿಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವ ರಾಮಲಿಂಗಾರೆಡ್ಡಿ,ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿದ್ದ ಸಂಪುಟ ಉಪಸಮಿತಿ ಈ ಬಗ್ಗೆ ತೀರ್ಮಾನಿಸಿದ್ದು ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಈಗಾಗಲೇ ಸಿಬಿಐ ಸಾಕ್ಷ್ಯಾಧಾರ ಕೊರತೆ ಕಾರಣ ನೀಡಿದ ಜನಾರ್ಧನ್ ರೆಡ್ಡಿ  ವಿರುದ್ಧದ ತನಿಖೆಗೆ ತಿಲಾಂಜಲಿ  ಇಟ್ಟಿದೆ. ಆದರೂ ಮತ್ತೆ ಹಟಕ್ಕೆ ಬಿದ್ದಂತೆ ತನಿಖೆ ಆರಂಭಿಸಲು ನಿರ್ಧರಿಸಿರುವ ರಾಜ್ಯಸರ್ಕಾರ,  ಎಸ್​ಐಟಿ ಮೂಲಕ ತನಿಖೆ ಮಾಡಿಸಲು ನಿರ್ಧರಿಸಿದೆ.

ಈಗಾಗಲೇ 100 ಪೊಲೀಸ್ ಅಧಿಕಾರಿಗಳನ್ನೊಳಗೊಂದ ಎಸ್​ಐಟಿ ತಂಡ ರಚನೆಗೆ ಸಿದ್ಧತೆ ಆರಂಭಿಸಿರುವ ಸರ್ಕಾರ ಒಂದೇ ವಾರದಲ್ಲಿ ಜನಾರ್ಧನ ರೆಡ್ಡಿ ಬಂಧಿಸಿ, ಒಂದು ವಾರದಲ್ಲಿ ಆಸ್ತಿ-ಪಾಸ್ತಿ ವಶಪಡಿಸಿಕೊಳ್ಳಲು ನಿರ್ಧರಿಸಿದೆ.

ಸಂಪುಟ ಉಪಸಮಿತಿಯ ಶಿಫಾರಸ್ಸು ಮುಂದಿನ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ. ಈ ವಿಚಾರ ಕ್ಯಾಬಿನೇಟ್​ನಲ್ಲಿ ಓಕೆಯಾಗಲಿದ್ದು, ತಕ್ಷಣವೇ ರೆಡ್ಡಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕೇವಲ ಜನಾರ್ಧರ್ ರೆಡ್ಡಿ ಮಾತ್ರವಲ್ಲದೇ ಅವರ ಆಪ್ತರನ್ನು ಬಂಧಿಸಿ ಅವರ ಆಸ್ತಿಪಾಸ್ತಿಗಳನ್ನು ಕೂಡ ಮುಟ್ಟುಗೋಲು ಹಾಕುವಂತೆ ಕ್ಯಾಬಿನೇಟ್ ಸಬ್ ಕಮಿಟಿ ಶಿಫಾರಸ್ಸು ಮಾಡಿದೆ.

ಒಟ್ಟಿನಲ್ಲಿ ಚುನಾವಣೆಗೆ ಮುನ್ನವೇ ಜನಾರ್ಧನ ರೆಡ್ಡಿ ಜೈಲು ಸೇರೋದು ಖಚಿತವಾದಂತಾಗಿದೆ.