ಜನಾರ್ಧನ ರೆಡ್ಡಿ ಬಂಧನಕ್ಕೆ ಸಿದ್ದತೆ ! ಗಣಿ ಆರೋಪಿಗಳಿಗೆ ಮತ್ತೆ ಕಾದಿದೆ ಸಂಕಷ್ಟ !

ಗಣಿಧಣಿ ಜನಾರ್ಧನ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸಿಬಿಐ ಕ್ಲೋಸ್​ ಮಾಡಿದ್ದ ಅದಿರು ಕೇಸ್​ ರಿ ಓಫನ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

ಕಳೆದ ವಾರ ಸಿಬಿಐ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು 35 ಸಾವಿರ ಕೋಟಿ ರೂಪಾಯಿಗಳ ಈ ಹಗರಣಕ್ಕೆ ಸಾಕ್ಷ್ಯದ ಕೊರತೆ ಇದೆ ಎಂದು ಪ್ರಕರಣ ಇತ್ಯರ್ಥ ಮಾಡಿರುವುದಾಗಿ ತಿಳಿಸಿತ್ತು.


ಈ ಪತ್ರ ಆಧರಿಸಿ ಕರ್ನಾಟಕದ ಬಂದರುಗಳ ಮೂಲಕ ಅಕ್ರಮವಾಗಿ ಸರಬರಾಜು ಮಾಡಿರುವ 35 ಸಾವಿರ ಕೋಟಿ ರೂ ಹಗರಣದ ಮರುತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಕ್ಯಾಬಿನೇಟ್ ಸಬ್ ಕಮಿಟಿ ಇಂದು ಸರ್ಕಾರಕ್ಕೆ ಎಸ್​ಐಟಿ ತನಿಖೆಗೆ ಶಿಫಾರಸ್ಸು ಮಾಡಲಿದೆ.

ಮುಂದಿನ ವಾರ ಎಸ್​ಐಟಿ ತನಿಖೆ ಶುರುವಾಗಲಿದ್ದು, ಮೊದಲು ಜನಾರ್ಧನ ರೆಡ್ಡಿಯವರನ್ನು ಬಂಧಿಸಿ ಅವರ ಮತ್ತು ಅವರ ಆಪ್ತರ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ.

ಈ ಹಿಂದೆ ತನಿಖೆ ನಡೆಸಿದ್ದ ಮಹಾರಾಷ್ಟ್ರ ಕೇಡರ್​​ನ ಅಧಿಕಾರಿ ಎಡಿಜಿಪಿ ಲಕ್ಷ್ಮೀನಾರಾಯಣ ಅವರನ್ನೇ ಎಸ್​ಐಟಿ ಮುಖ್ಯಸ್ಥರನ್ನಾಗಿ ನೇಮಿಸಲು ರಾಜ್ಯ ಸರ್ಕಾರ ಮುಂಧಾಗಿದೆ.

ಕನಿಷ್ಟ 1 ವರ್ಷಗಳ ಕಾಲ ಜನಾರ್ಧನ ರೆಡ್ಡಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಬಂಧಿಸಿ ಇಡಲು ಸಿದ್ಧತೆ ನಡೆಸಿದೆ.

ಎಲ್ಲವೂ ಲೆಕ್ಕಾಚಾರದಂತೆ ನಡೆದರೇ ಮುಂದಿನ ವಾರವೇ ಜನಾರ್ಧನ್ ರೆಡ್ಡಿ ಬಂಧನವಾಗಲಿದೆ.