ಜೆಡಿಎಸ್ ನಾಯಕನಾಗಿ “ಪ್ರಜ್ವಲಿಸಿದ” ದೇವೇಗೌಡರ ಮೂರನೇ ತಲೆಮಾರು !! ಮೊಮ್ಮಗನೇ ಪ್ರಧಾನ ಕಾರ್ಯದರ್ಶಿ !!

Deve Gowda appoints grandson Prajwal Revanna as general secretary.
Deve Gowda appoints grandson Prajwal Revanna as general secretary.

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಎಚ್ ಡಿ ದೇವೇಗೌಡರ ಅದೇಶದಂತೆ, ಎಚ್ ಡಿ‌ ಕುಮಾರಸ್ವಾಮಿ ಸೂಚನೆಯಂತೆ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ ಎಂ ಫಾರೂಕ್ ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ.

Deve Gowda appoints grandson Prajwal Revanna as general secretary.
Deve Gowda appoints grandson Prajwal Revanna as general secretary.

ಪ್ರಜ್ವಲ್ ರೇವಣ್ಣ ಈ ಬಾರಿ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚುನಾವಣೆ ಸ್ಪರ್ಧಿಸುವ ಉತ್ಸಾಹದ ಭರದಲ್ಲಿ ಜೆಡಿಎಸ್ ನಲ್ಲಿ ಸೂಟ್ ಕೇಸ್ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿ ವಿವಾದಕ್ಕೆ ಈಡಾಗಿದ್ದರು.

ಇಂದು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಬಿಟಿವಿ ಜೊತೆ ಪ್ರಜ್ವಲ್ ರೇವಣ್ಣ ಮಾತನಾಡಿದ್ರು .

Deve Gowda appoints grandson Prajwal Revanna as general secretary.
Deve Gowda appoints grandson Prajwal Revanna as general secretary.

“ಹೊಳೆ ನರಸೀಪುರದಿಂದ ನನ್ನ ಹೋರಾಟ ಆರಂಭವಾಗಿದೆ. ನನ್ನನ್ನು ಜನರೇ ಯುವ ನಾಯಕ ಅಂತಾ ಗುರುತಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ನನ್ನ ಹೋರಾಟ ನಡೆಯುತ್ತಲೇ ಇದೆ. ನಾನು ಪಕ್ಷಕ್ಕಾಗಲೀ, ಜನರಿಗಾಗಲೀ ಹೊಸಬನೇನಲ್ಲಾ. ನನಗೆ ಈಗ ಹೊಸ ಜವಾಬ್ದಾರಿ ನೀಡಿರುವುದು ಖುಷಿ ತಂದಿದೆ. ಇದು ನನಗೂ, ನನ್ನ ಜತೆಗಿರುವ ಕಾರ್ಯಕರ್ತರಿಗೂ ಹೊಸ ಶಕ್ತಿ. ಮುಂದಿನ ದಿನಗಳಲ್ಲಿ ಪಕ್ಷ ಬಲಗೊಳಿಸಲು ಪ್ರಯತ್ನಿಸುವೆ. ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ದೇವೇಗೌಡರು, ಹೆಚ್ ಡಿ ಕುಮಾರಸ್ವಾಮಿ ಯವರೇ ನಿರ್ಧರಿಸುತ್ತಾರೆ. ಪಕ್ಷದ ಕೋರ್​​ ಕಮಿಟಿಯಲ್ಲೇ ಟಿಕೆಟ್​ ಬಗ್ಗೆ ನಿರ್ಧಾರ ಆಗುತ್ತೆ. ನಾನು ಇನ್ನೂ ಸ್ಪರ್ಧೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ ” ಎಂದಿದ್ದಾರೆ.

Watch Here: https://youtu.be/aAAqfLCyQBQ