ಕಲಬುರ್ಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೇಟ್​ಗಾಗಿ ಮತ್ತೆ ಶುರುವಾಯ್ತು ಪೈಪೋಟಿ- ಅಪ್ಪಾಗೆ ಸಿಗುತ್ತಾ ದತ್ತಾ ಪಾಲಾಗುತ್ತಾ ಬಿ ಫಾರಂ?

Kalburgi: Competition for tickets Between Candidatesin BJP
Kalburgi: Competition for tickets Between Candidatesin BJP

ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದಂತೆ ಬಿಜೆಪಿಯಲ್ಲಿ ಟಿಕೇಟ್ ಗೊಂದಲ ಶುರುವಾಗಿದೆ.

ad


ಕಲಬುರ್ಗಿ ದಕ್ಷಿಣ ಮತ ಕ್ಷೇತ್ರದ ಟಿಕೇಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ. ಈ ಹಿಂದೆ ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ವೇಳೆ ಹಾಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್​ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಆದರೇ ಇದೀಗ ವಿಶ್ವಹಿಂದೂ ಪರಿಷತ್​​ ಗೌರವಾಧ್ಯಕ್ಷ ಲಿಂಗರಾಜ್​ ಅಪ್ಪಾ ಅವರಿಗೆ ಟಿಕೇಟ್​ ನೀಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಸಾಕಷ್ಟು ಗೊಂದಲ ಉಂಟಾಗಿದೆ.

ಬಿಜೆಪಿಯಿಂದ ಕಲಬುರ್ಗಿ ದಕ್ಷಿಣ ಮತ ಕ್ಷೇತ್ರದ ಅಭ್ಯರ್ಥಿಯಾಗಿ ರೆಡಿಯಾಗಲು ಸಂಘ ಪರಿವಾರ ವಿಶ್ವ ಹಿಂದೂ ಪರಿಷತ್ ಗೌರಾವಧ್ಯಕ್ಷ ಲಿಂಗರಾಜ್ ಅಪ್ಪಾ ಅವರಿಗೆ ಸೂಚನೆ ಬಂದಿದೆ ಎಂಬ ಮಾಹಿತಿ ಹರಿದಾಡತೊಡಗಿದೆ. ಇದಕ್ಕೆ ಲಿಂಗರಾಜ್​ ಅಪ್ಪಾ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಪ್ರತಿಕ್ರಿಯೆ ನೀಡಿರುವ ಲಿಂಗರಾಜ್ ಅಪ್ಪಾ, ನನ್ಗೆ ಟಿಕೇಟ್ ನೀಡಿದ್ರೆ ಸ್ಪರ್ದೆ ಮಾಡ್ತೆನೆ ಆದ್ರೆ ಯಾರಿಗೂ ನೋವು ಉಂಟು ಮಾಡುವ ಕೆಲ್ಸಾ ಮಾಡಿಲ್ಲ ಕಳೆದ ಹಲವು ವರ್ಷಗಳಿಂದ ನಾನು ಸಂಘ ಪರಿವಾರದಲ್ಲಿ ಕೆಲ್ಸಾ ಮಾಡಿದ್ದೆನೆ ಜಿಲ್ಲಾ ನಾಯಕರು ನನ್ನ ಅಭಿಪ್ರಾಯ ಕೇಳಿದ್ದಾರೆ ನಾನು ನನ್ನ ಅದಕ್ಕೆ ಒಪ್ಪಿಗೆ ಸೂಚಿಸಿದ್ದೆನೆ ಎಂದಿದ್ದಾರೆ.

ಆದರೇ ಕಲಬುರ್ಗಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ದಕ್ಷಿಣ ಮತಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ರು. ಈಗ ಮತ್ತೊಂದು ಹೆಸರು ಕೇಳಿ ಬರ್ತಿರೋದರಿಂದ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ.
‘ಅಲ್ಲದೇ ಹಾಲಿ ಶಾಸಕ ದತ್ತಾತ್ರಯ ಪಾಟೀಲ್ ರೇವುರ್ ಅವರಿಗೆ ಈ ಹಿಂದೆ ಟಿಕೇಟ್ ನೀಡದೆ ಇದ್ದಿದ್ರಿಂದ ಅವರ ತಾಯಿ ಅರುಣಾ ಪಾಟೀಲ್ ರೇವೂರ್ ಅವರು ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ರು. ಆದ್ರೆ ಈ ಬಾರಿ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.