ಖರ್ಗೆ ಮನೆ ಎದುರು “ಕೈ” ಕೈ ಮಿಲಾಯಿಸಿದ ನಾಯಕರು !! ಇದು ಕಾಂಗ್ರೆಸ್ ಭಿನ್ನಮತದ ಕತೆ !

Kalburgi: Congress Leaders Fights in front of Mallikarjun Kharge Residence.
Kalburgi: Congress Leaders Fights in front of Mallikarjun Kharge Residence.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದೊಳಗಿನ ನಾಯಕರ ಕಚ್ಚಾಟ ಮಿತಿಮೀರತೊಡಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದೊಳಗೆ ಕೈ ಭಿನ್ನಮತ ತಾರಕಕ್ಕೇರಿದೆ.

ಸಂಸತ್ತಿನ ಕಾಂಗ್ರೆಸ್ ಶಾಸಕಾಂಗ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕರು. ಖರ್ಗೆ ಶಿಷ್ಯರ ಮಧ್ಯೆಯೇ ಈಗ ಜಗಳಗಳು ಪ್ರಾರಂಭವಾಗಿದೆ.

 

ಮಲ್ಲಿಕಾರ್ಜುನ ಖರ್ಗೆ ಪರಮಾಪ್ತ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಮತ್ತು ತಿಪ್ಪಣ್ಣಪ್ಪ ಜಗಳ ಕೈ ಕೈ ಮಿಲಾಸುವ ಹಂತಕ್ಕೆ ತಲುಪಿದೆ.

ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಇಂದು ಬಾಬೂರಾವ್ ಚಿಂಚನಸೂರ್ ಮತ್ತು ತಪ್ಪಣ್ಣಪ್ಪ ಇಬ್ಬರೂ ಬಂದಿದ್ದರು. ಈಗಾಗಲೇ ನಿಗಮವೊಂದರ ಅಧ್ಯಕ್ಷರಾಗಿರುವ ಬಾಬೂರಾವ್ ಚಿಂಚನಸೂರು ಮತ್ತಷ್ಟೂ ಅವಕಾಶಗಳನ್ನು ಬಾಚಿಕೊಳ್ಳೋದು ತಿಪ್ಪಣ್ಣಪ್ಪ ಆಕ್ಷೇಪಕ್ಕೆ ಕಾರಣ.

 

 

ಈ ಬಗ್ಗೆ ಖರ್ಗೆ ನಿವಾಸದಲ್ಲೇ ಇಬ್ಬರ ಮದ್ಯೆ ಚರ್ಚೆ ಆರಂಭವಾಗಿದೆ. ಮಾಜಿ ಸಚಿವ ಚಿಂಚನಸೂರ್​​ -ತಿಪ್ಪಣ್ಣಪ್ಪ ನಡುವೆ ವಾಕ್ಸಮರ
ಏಕ ವಚನದ ಹಂತ ತಲುಪಿತ್ತಯ. ಇಬ್ಬರೂ ಬೈದಾಡಿಕೊಂಡಿದು ಜಟಾಪಟಿ ಕೈಕೈ ಮಿಲಾಯಿಸೋ ಹಂತ ತಲುಪಿದೆ.

 

 

ಈವರೆಗೂ ತೆರೆಮರೆಯಲ್ಲಿ ನಡೆಯುತ್ತಿದ್ದ ನಾಯಕರ ಭಿನ್ನಮತಗಳ ಈಗ ಹಾದಿಬೀದಿ ರಂಪವಾಗುತ್ತಿದೆ.