ಸೀಎಂ ಗೆ ಮುಸ್ಲಿಮರ ಮೇಲೆ ಪ್ರೀತಿಯಿಲ್ಲ, ಅವರ ವೋಟಿನ ಮೇಲಿದೆ – ಕಲ್ಲಡ್ಕ ಪ್ರಭಾಕರ ಭಟ್

ಸಿಎಂ ಸಿದ್ದರಾಮಯ್ಯನವರಿಗೆ ಮುಸ್ಲಿಂರ ಮೇಲೆ ಪ್ರೀತಿ ಇಲ್ಲ. ಆದ್ರೆ, ಅವರ ವೋಟಿನ ಮೇಲೆ ಪ್ರೀತಿ ಇದೆ. ಅದಕ್ಕೆ ಹಿಂದೂ ಮುಸ್ಲಿಂ ನಡುವೆ ಘರ್ಷಣೆ ಉಂಟು ಮಾಡುತ್ತಿದ್ದಾರೆ ಅಂತ ಆರ್​.ಎಸ್​.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದ್ದಾರೆ.

ad


ಶಿವಮೊಗ್ಗದ ಆಯನೂರಿನಲ್ಲಿ ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಮಾತ್ನಾಡಿದ ಕಲ್ಲಡ್ಕ ಪ್ರಭಾಕರ್, ಮುಸ್ಲಿಂ ರಾಷ್ಟ್ರಗಳಲ್ಲಿ ಗೋ ಹತ್ಯೆ ಇಲ್ಲ. ಆದ್ರೆ, ಭಾರತದಲ್ಲಿ ಮಾತ್ರ ಗೋಹತ್ಯೆ ಇದೆ ಅಂತ ವಾಗ್ದಾಳಿ ನಡೆಸಿದ್ದಾರೆ.