ಮಂಡ್ಯಗೆ ಎಂಟ್ರಿ ಕೊಟ್ಟ ರಮ್ಯಾ !! ಮೋಹಕ ತಾರೆ ಸ್ಪರ್ಧೆ ಫಿಕ್ಸ್ !!

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಯಾಂಡಲವುಡ್​​ ಕ್ವೀನ್​ ಹಾಗೂ ಕಾಂಗ್ರೆಸ್​​ನ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯ ಫೀಲ್ಡಿಗಿಳಿದಿದ್ದಾರೆ. ಹೌದು ಈಗಾಗಲೇ ಮಂಡ್ಯದಿಂದ ರಮ್ಯಗೆ ಎಮ್​.ಎಲ್.ಎ ಟಿಕೇಟ್​ ಕನ್ಪರ್ಮ ಆಗಿರುವ ಸುದ್ದಿಯನ್ನು ಬಿಟಿವಿನ್ಯೂಸ್​ ಬಿತ್ತರಿಸಿತ್ತು.

ಈ ನ್ಯೂಸ್​ಗೆ ಪೂರಕ ಎಂಬಂತೆ ಈಗಾಗಲೇ ಮಾಜಿ ಸಂಸದೆ ರಮ್ಯ ಮಂಡ್ಯದತ್ತ ಮುಖಮಾಡಿದ್ದಾರೆ.
ಕಳೆದ ಚುನಾವಣೆ ವೇಳೆ ಹಾಗೂ ಸಂಸದರಾದ ಬಳಿಕ ರಮ್ಯ ನೆಹರು ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ಈಗ ಅದೇ ಮನೆಯನ್ನು ರಮ್ಯ ಖರೀದಿಸಿದ್ದು, ಕಾಂಗ್ರೆಸ್​ನ ಹಿರಿಯ ಮುಖಂಡರ ಸಲಹೆ ಮೇರೆಗೆ ಕ್ಷೇತ್ರದ ಜನರ ಕುಂದುಕೊರತೆ ಆಲಿಸಲು ಸಜ್ಜಾಗಿದ್ದಾರೆ.

ಈಗಾಗಲೇ ರಮ್ಯ ತಮ್ಮ ನೂತನ ನಿವಾಸದ ವಿನ್ಯಾಸದ ಕೆಲಸ ಆರಂಭಿಸಿದ್ದಾರೆ. ನವೆಂಬರ್​ 29 ರಂದು ರಮ್ಯ ಹುಟ್ಟಿದ ಹಬ್ಬವಿದ್ದು, ಅದೇ ಈ ಮನೆ ಪ್ರವೇಶಿಸಿ ಇಲ್ಲಿಂದಲೇ ರಾಜಕೀಯ ಚಟುವಟಿಕೆ ನಡೆಸಲಿದ್ದಾರೆ. ಮಾಜಿ ಸಚಿವ ಅಂಬರೀಶ್​ ಮಂಡ್ಯ ಹಾಗೂ ತಮ್ಮ ಕ್ಷೇತ್ರದತ್ತ ಮುಖಮಾಡುತ್ತಿಲ್ಲ. ಹೀಗಾಗಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಮ್ಯ ಕಣಕ್ಕಿಳಿಸಿ ಕಾಂಗ್ರೆಸ್​ ತನ್ನ ಮುಖಭಂಗ ತಪ್ಪಿಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಸಂಸದ ಎಲೆಕ್ಷನ್​ ಬಳಿಕ ಜಿಲ್ಲೆಯತ್ತ ಮುಖ ಮಾಡದ ರಮ್ಯ ನವೆಂಬರ್ 29 ರಿಂದ ಸಕ್ರಿಯವಾಗಿ ಸಕ್ಕರೆ ನಾಡಿನ ರಾಜಕೀಯದಲ್ಲಿ ತೊಡಗಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.