ಉಪೇಂದ್ರರ ಕೆಪಿಜೆಪಿಯಲ್ಲಿ ಓಟಿಗೆ 200 ರೂಪಾಯಿ !! ಬುದ್ದಿವಂತ ನಟನ ಕಾನ್ಸೆಪ್ಟ್ ಉಲ್ಟಾ ?

Kolar: Distribution of money to voters from KPJP party.

ಭ್ರಷ್ಟಾಚಾರವನ್ನು ಕಟುವಾಗಿ ವಿರೋಧಿಸಿದ್ದ ನಟ-ನಿರ್ದೇಶಕ ಉಪೇಂದ್ರ ತಮ್ಮ ಕನಸಿನ ಕೂಸಾಗಿ ಕೆಪಿಜೆಪಿ ಪಕ್ಷವನ್ನು ಕಟ್ಟಿದ್ದರು. ಆದರೇ ಕೆಲ ವಿವಾದಗಳ ಬಳಿಕ ನಟ ಉಪೇಂದ್ರ ಪಕ್ಷ ತೊರೆದಿದ್ದಾರೆ.

ad


ಇತ್ತ ಉಪೇಂದ್ರ ಪಕ್ಷ ತೊರೆಯುತ್ತಿದ್ದಂತೆ ಕೆಪಿಜೆಪಿ ಪಕ್ಷ ಭ್ರಷ್ಟವಾಗಿದ್ಯಾ? ಎಂಬ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಕೋಲಾರದಲ್ಲಿ ನಡೆದ ಸಮಾವೇಶ.
ಹೌದು ಕೋಲಾರದ ಕೆಜಿಎಫ್​ನಲ್ಲಿ ನಡೆದ ಕೆಪಿಜೆಪಿ ಸಮಾವೇಶದಲ್ಲಿ ಕಾಂಚಾಣದ ಸದ್ದು ಜೋರಾಗಿದ್ದು, ಹಣ ಬಟ್ಟೆ ಹಂಚಿದ ದೃಶ್ಯ ಸಖತ್ ವೈರಲ್​ ಆಗಿದೆ. ನಿನ್ನೆ ಕೆಜಿಎಫ್​ನ ನಗರಸಭೆ ಮೈದಾನದಲ್ಲಿ ಕೆಪಿಜೆಪಿ ಸಮಾವೇಶ ನಡೆಯಿತು. ಈ ವೇಳೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರಿಗೆ ವೇದಿಕೆಯಲ್ಲಿ ಬಹಿರಂಗವಾಗಿ ಹಣ ಹಾಗೂ ಬಟ್ಟೆ ಹಂಚಲಾಯಿತು.

ಕೆಜಿಎಫ್​​​ ಕೆಪಿಜೆಪಿ ಅಭ್ಯರ್ಥಿ ಎನ್ನಲಾದ ವಲ್ಲಾಲ್ ಮುನಿಸ್ವಾಮಿ ಹಣ ಹಾಗೂ ಬಟ್ಟೆ ಹಂಚಿದ್ದು, ಜನರಿಗೆ ಹಣ ಹಂಚಿದ ವಲ್ಲಾಲ್ ಸ್ವಾಮಿ ಕಾಲಿಗೆ ಬಿದ್ದು ಆಶಿರ್ವಾದ ಕೇಳಿದರು.
ಇನ್ನು ಮತದಾರರನ್ನು ಸೆಳೆಯಲು ಸಮಾವೇಶ ನಡೆಸಿದ್ದ ವಲ್ಲಾಲ್​ ಮುನಿಸ್ವಾಮಿ, ವೇದಿಕೆಯಲ್ಲಿ ತಮಿಳು ಚಿತ್ರಗೀತೆಯ ಆಕ್ರೆಸ್ಟ್ರಾ ಹಾಕಿದ್ದರು. ಅಷ್ಟೇ ಅಲ್ಲ ತಮಿಳಿನಲ್ಲೇ ಭಾಷಣ ಮಾಡಿ ಮತಯಾಚನೆ ನಡೆಸಿದರು. ಒಟ್ಟಿನಲ್ಲಿ ಕೆಪಿಜೆಪಿ ಸಮಾವೇಶ ತಮಿಳು ನಾಡಿನ ಚುನಾವಣಾ ಪ್ರಚಾರದ ವೇದಿಕೆಯಂತೆ ಭಾಸವಾಗಿದ್ದಲ್ಲದೇ ಹಣ-ಬಟ್ಟೆ ಹಂಚಿಕೆ ಕೆಪಿಜೆಪಿ ಆಶಯಗಳಿಗೆ ತಿಲಾಂಜಲಿ ಇಟ್ಟಂತೆ ಭಾಸವಾಯಿತು.