“ಚುನಾವಣಾ ಕುರುಕ್ಷೇತ್ರ” 2018 (ಧಾರವಾಡ )

Kurukshetra:All Political Parties Preparation of 2018 Assembly Election.(Dharwad)
Kurukshetra:All Political Parties Preparation of 2018 Assembly Election.(Dharwad)

ಈಗ ನಾವು ಹೇಳ್ತಿರೋ ಕ್ಷೇತ್ರ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ.ಪ್ರಸ್ತುತ ಸಚಿವ ವಿನಯ್ ಕುಲಕರ್ಣಿ ಅವ್ರು ಇಲ್ಲಿನ ಶಾಸಕರಾಗಿದ್ದಾರೆ. ಈಗಾಗಲೇ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ವಿನಯ್ ಕುಲಕರ್ಣಿ ಅವ್ರು ನೇತೃತ್ವ ವಹಿಸಿರೋದ್ರಿಂದ ಈ ಬಾರಿ ಇಲ್ಲೇನಾಗತ್ತೆ ಅನ್ನೋದು ದೊಡ್ಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಿದ್ರೆ 2018 ರ ಮಹಾ ಚುನಾವಣೆಗೆ ಕ್ಷೇತ್ರ ಹೇಗೆ ರೆಡಿಯಾಗಿ ಅನ್ನೋದ್ರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

 

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ. ಪೇಡ ನಗರಿ ಅಂತಾನೇ ಕರೆಯೋ ಧಾರವಾಡ ಜಿಲ್ಲೆಯಲ್ಲಿರೋ 7 ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಇದೂ ಒಂದು. ವಿಶ್ವ ಪ್ರಸಿದ್ಧವಾಗಿರೋ ಇಲ್ಲಿನ ಪೇಡದಿಂದಾಗೀನೇ ದಾರವಾಡವನ್ನು ಪೇಡ ನಗರಿ ಅಂತಾ ಕರೆಯಲಾಗತ್ತೆ. ಈ ಕ್ಷೇತ್ರದಲ್ಲಿ ರಾಜಕೀಯ ಬಳವಣಿಗೆಗಳು ಸಾಕಷ್ಟು ನಡೀತಾನೇ ಇರತ್ತೆ. 2008ರಲ್ಲಿ ಬಿಜೆಪಿಯ ಸೀಮಾ ಮಸೂತಿ ಅವ್ರು ಇಲ್ಲಿ ವಿನಯ್ ಕುಲಕರ್ಣಿ ಅವ್ರನ್ನು ಸೋಲಿಸಿದ್ರು. ಆದ್ರೆ 2013ರಕ್ಕೆ ಬಂದಾಗ ಬಿಜೆಪಿ ಒಡೆದ ಮನೆಯಾಗಿತ್ತು ಕೆಜೆಪಿ ಕಣದಲ್ಲಿ ಇದ್ದಿದ್ದರಿಂದ ಮತಗಳು ವಿಭಜನೆಯಾಯ್ತು. ಪರಿಣಾಮ ವಿನಯ್ ಕುಲಕರ್ಣಿ ಗೆಲುವನ್ನು ದಾಖಲಿಸಿದ್ರು. ಆದ್ರೆ ಬಿಜೆಪಿ ಶಾಸಕಿಯಾಗಿದ್ದ ಸೀಮಾ ಮಸೂತಿ ಅವ್ರು ನಾಲ್ಕನೇ ಸ್ಥಾನ ಪಡೆಯಬೇಕಾಯ್ತು. ಜೆಡಿಎಸ್ ಬಿಜೆಪಿಯ ಒಳ ಜಗಳ ಅಸಮಾಧಾನವನ್ನು ಲಾಭ ಮಾಡಿಕೊಳ್ತು. ಪರಿಣಾಮ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಅಮೃತ್ ದೇಸಾಯಿ 2 ನೇ ಸ್ಥಾನ ಗಳಿಸಿದ್ರು. ಹೀಗೇ ಗೆದ್ದು ಶಾಸಕರಾದ ವಿನಯ್ ಕುಲಕರ್ಣಿ ಅವ್ರಿಗೆ ಈ ಬಾರಿ ಸಚಿವ ಸ್ಥಾನ ಕೂಡಾ ಸಿಕ್ಕಿತು. ಹಾಗೇ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ್ರು. ಆದ್ರೆ ಈ ಬಾರಿಯ ಎಲೆಕ್ಷನ್ ಮೇಲೆ ಪರಿಣಾಮ ಬೀರೋ ಅಂಶಗಳೇನು..ಇಲ್ಲಿ ಈ ಬಾರಿ ಏನಾಗಬಹುದು ಅನ್ನೋದನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ವಿನಯ್ ಕುಲಕರ್ಣಿ ಅವ್ರು 53453 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಅವ್ರಿಗೆ ಫೈಟ್ ಕೊಟ್ಟ ಜೆಡಿಎಸ್ ನ ಅಮೃತ್ ದೇಸಾಯಿ 35133 ಮತಗಳನ್ನು ಪಡೆಯೋ ಮೂಲಕ ಸೋತ್ರು. ಇನ್ನು ಕೆಜೆಪಿಯ ಅಷ್ಟಗಿ ತವನಪ್ಪಾ 21589 ಮತಗಳನ್ನು ಪಡೆದ್ರೆ ಬಿಜೆಪಿಯ ಸೀಮಾ ಮಸೂತಿ ಅವ್ರು 16896 ಮತಗಳನ್ನು ಪಡೆದ್ರು.

ಈ ಬಾರಿ ಕಾಂಗ್ರೆಸ್ ಧಾರವಾಡ ಜಿಲ್ಲೆಯಲ್ಲಿರೋ ಅಷ್ಟೂ ಕ್ಷೇತ್ರಗಳನ್ನು ಗೆಲ್ಲ ಬೇಕು ಅನ್ನೋ ಉದ್ದೇಶದಿಂದಾನೇ ಮೊದಲಿಗೆ ಕಲಘಟಗಿ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ಅವ್ರನ್ನು ಸಚಿವರನ್ನಾಗಿ ಮಾಡಿತು. ಆದ್ರೆ ಅದಾದ ನಂತ್ರ ಸಚಿವ ಸ್ಥಾನದಿಂದ ಸಂತೋಷ್ ಲಾಡ್ ತೆರವಾಗಬೇಕಾಯ್ತು. ಆದ್ರೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವ್ರನ್ನು ಸಚಿವರನ್ನಾಗಿ ಮಾಡೋ ಮೂಲಕ ಮತ್ತೊಮ್ಮೆ ಇಲ್ಲಿನ ಜನರ ಮನಸ್ಸು ಗೆಲ್ಲೋದಕ್ಕೆ ಕಾಂಗ್ರೆಸ್ ಮುಂದಾಯ್ತು. ಹಾಗಾಗಿ ಇಡೀ ಜಿಲ್ಲೆಯಿಂದ ಇಬ್ಬರು ಶಾಸಕರುಗಳು ಸಚಿವರಾಗಿದ್ದರಿಂದ ಇಲ್ಲಿನ ಎಲ್ಲಾ ಕ್ಷೇತ್ರಗಳ ಮೇಲೂ ಅದ್ರ ಪ್ರಭಾವ ಇದ್ದೇ ಇರತ್ತೆ.

ಆದ್ರೆ ಇದು ಒಂದ್ಕಡೆ ಆದ್ರೆ ಸಚಿವರಾಗಿರೋ ವಿನಯ್ ಕುಲಕರ್ಣಿ ಅವ್ರು ಈ ಕ್ಷೇತ್ರಕ್ಕೆ ಏನು ಮಾಡಿದ್ದಾರೆ. ಮತದಾರರ ಅಭಿಪ್ರಾಯ ಅವ್ರ ಪರ ಇದ್ಯಾ? ಕಳೆದ ಬಾರಿ ಜೆಡಿಎಸ್ ನಲ್ಲಿದ್ದು 2 ನೇ ಸ್ಥಾನ ಪಡೆದಿದ್ದ ಅಮೃತ್ ದೇಸಾಯಿ ಬಿಜೆಪಿ ಗೆ ಬಂದಿದ್ದಾರೆ ಇದು ಬಿಜೆಪಿ ಗೆ ಹೇಗೆ ಲಾಭವಾಗತ್ತೆ? ಇನ್ನು ಜೆಡಿಎಸ್ ಈ ಬಾರಿ ಇಲ್ಲಿ ಯಾರನ್ನು ಕಣಕ್ಕಿಳಿಸತ್ತೆ ಅನ್ನೋ ಪ್ರಶ್ನೆಗಳು ಖಂಡಿತವಾಗ್ಲೂ ಇಲ್ಲಿನ ಮತದಾರರ ಮನದಲ್ಲಿದೆ. ಬನ್ನಿ ಹಾಗಿದ್ರೆ ಈ ಬಾರಿಯ ರಣಕಣದಲ್ಲಿ ಯಾರ್ಯಾರಿರ್ತಾರೆ ಅವ್ರ ಬಲಾ ಬಲ ಏನು ನೋಡೋಣ.

ಕೈ ಅಭ್ಯರ್ಥಿ

ವಿನಯ್ ಕುಲಕರ್ಣಿ, ಸಚಿವರು

ಹೌದು ಸಚಿವರಾಗಿರೋ ವಿನಯ ಕುಲಕರ್ಣಿ ಈ ಬಾರಿ ಮತ್ತೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯೋದು ಕನ್ಫರ್ಮ್. ಮೊದಲ ಬಾರಿ ಸಚಿವನಾಗಿರುವ ವಿನಯ ಕುಲಕರ್ಣಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿ ಕೆಲ್ಸ ಮಾಡ್ತಿದ್ದಾರೆ..

ಆದ್ರೆ ಕ್ಷೇತ್ರದ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಕೊಂಡು ಜಿಲ್ಲೆಯ ಅಭಿವೃದ್ಧಿ ಹಾಗೂ ಗಣಿ ಮತ್ತು ಭೂ ವಿಜ್ನಾನ ಸಚಿವರಾಗಿದ್ದು ಕೊಂಡು ಆ ಇಲಾಖೆಯ ವ್ಯಾಪ್ತಿಯ ಜಾಸ್ತಿ ಪ್ರಾಮುಖ್ಯತೆ ಕೊಡೋದು ಬಿಟ್ಟು ಶಾಸಕನಾಗಿ ಸಚಿವನಾಗಿರುವ ಕುಲಕರ್ಣಿ ಹೆಚ್ಚಿನ ಪ್ರಾಶಸ್ತ್ಯವನ್ನು ಲಿಂಗಾಯತ್​ ಹೋರಾಟಕ್ಕೆ ಕೊಟ್ಟಿದ್ದಾರೆ .

ಅಷ್ಟೇ ಅಲ್ಲದೆ ರಾಷ್ಟ್ರೀಯಬಸವ ಸೇನೆ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ರಾಜ್ಯದ ಉದ್ದಗಲಕ್ಕೂ ಲಿಂಗಾಯತ ಹೋರಾಟವನ್ನು ಬಲಪಡಿಸಿ ಸ್ವತಂತ್ರ್ಯ ಧರ್ಮ ಸಿಗುವವರೆಗೂ ನಿಂತರವಾಗಿ ಹೋರಾಟ ಇರುತ್ತೆ ಅಂತಾ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಇದ್ರಿಂದ ಪ್ರತ್ಯೇಕ ಧರ್ಮ ಅಪೇಕ್ಷೆ ಇರೋರು ಇವ್ರಿಗೆ ಸಪೂರ್ಟ್ ಮಾಡೋ ಕಾರಣ ಒಂದು ರೀತಿಯಲ್ಲಿ ಪ್ಲಸ್ ಆದ್ರೂ ಕೂಡಾ ಶಾಸಕರಾಗಿದ್ದುಕೊಂಡು, ಸಚಿವರಾಗಿದ್ದುಕೊಂಡು ತಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಅಂತಾ ಇಲ್ಲಿನ ಮತದಾರರು ಕೇಳ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತಾಡೋದಾದ್ರೆ ಅಂತಹ ಹೇಳಿ ಕೊಳ್ಳೋ ಕೆಲ್ಸಗಳನ್ನು ಸಚಿವರು ಇಲ್ಲಿ ಮಾಡೇ ಇಲ್ಲ. ಅವ್ರಿಗೆ ಹೋರಾಟವೇ ಮುಖ್ಯವಾಯ್ತು ಅನ್ನೋದು ಇಲ್ಲಿನವರ ಅಭಿವಪ್ರಾಯ.

ಇನ್ನು ಸಚಿವ ವಿನಯ್ ಕುಲಕರ್ಣಿಗೆ ಹಿನ್ನಡೆ ಉಂಟು ಮಾಡೋ ವಿಚಾರ ಅಂದ್ರೆ ಬಿಜೆಪಿಯ ಇನ್ನು ಜಿ.ಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ. ಇದ್ರಲ್ಲಿ ಸಚಿವ ವಿನಯ ಕುಲಕರ್ಣಿ ಹೆಸರು ಕೇಳಿ ಬಂದು ದೊಡ್ಡ ಸುದ್ದಿಯಾಗಿ ಅವ್ರಿಗೆ ಇರಿಸು ಮುರುಸು ತಂದಿದ್ದು ನಿಜ. ಬಿಜೆಪಿಯಂತೂ ಸಚಿವರ ಮೇಲೆ ಆರೋಪ ಹೊರಿಸಿ ರಾಜಿನಾಮೆಗೆ ಒತ್ತಾಯಿಸಿದ್ರೆ, ಸಚಿವರು ನಾನೇನು ತಪ್ಪೆ ಮಾಡಿಲ್ಲಾ ಎಂದು ಸ್ಪಷ್ಟೆನೆ ಕೊಟ್ರು. ಆದ್ರೆ ಇದು ವಿನಯ್ ಕುಲಕರ್ಣಿಗೆ ಹೊಡೆತ ಕೊಟ್ಟಿರೋದಂತೂ ಸುಳ್ಳಲ್ಲ. ಇನ್ನು ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ದೊಡ್ಡ ಮಟ್ಟದ ಫೈಟ್​​ ನಡೆದಂತೆ ಕಂಡು ಬಂದಿದ್ದು, ಚುನಾವಣೆ ಸಂದರ್ಭದಲ್ಲಿ ಮತ್ತೊಮ್ಮೆ ಇದು ಸ್ಫೋಟ ವಾಗಬಹುದು. ಅಲ್ಲದೇ ಸಚಿವ ವಿನಯ ಕುಲಕರ್ಣಿಗೆ ಇದೊಂದು ಪ್ರಕರಣ ನೆಗೆಟಿವ್​ ಆಗಿರೋದಂತೂ ಸತ್ಯ.

ಕಮಲ ಮುಡಿಯೋರ್ಯಾರು?

ಈ ಬಾರಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಚಿವ ವಿನಯ್ ಕುಲಕರ್ಣಿ ವಿರೋಧದ ಅಲೆ ಇರೋದ್ರಿಂದ ಬಿಜೆಪಿ ಇಲ್ಲಿ ಗೆಲ್ಲೋ ಸಾಧ್ಯತೆಗಳೂ ಜಾಸ್ತಿ ಇದೆ. ಹಾಗಾಗಿನೇ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಹಾಗಿದ್ರೆ ಯಾರ್ಯಾರಿದ್ದಾರೆ ಟಿಕೆಟ್ ಆಕಾಂಕ್ಷಿಗಳು ನೋಡೋಣ:

ಸೀಮಾ ಮಸೂತಿ, ಮಾಜಿ ಶಾಸಕರು

2008ರಲ್ಲಿ ಶಾಸಕರಾಗಿ ಆಯ್ಕೆಯಾಗಿ 2013ರಲ್ಲಿ ಸೋತ ಬಿಜೆಪಿಯ ಮಾಜಿ ಶಾಸಕಿ ಸೀಮಾ ಮಸೂತಿ ಅವ್ರು ಈ ಬಾರಿ ಮತ್ತೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ.

ಕಳೆದ ಬಾರಿ ಬಿಜೆಪಿ ಇಲ್ಲಿ ಸೋಲೋದಕ್ಕೆ ಕಾರಣ ಪಕ್ಷದೊಳಗಿನ ಭಿನ್ನಮತ, ಅಸಮಾಧಾನ ಹಾಗೂ ಕೆಜೆಪಿ ರಚನೆಯಾಗಿದ್ದು ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ಈ ಬಾರಿ ಅಸಮಾಧಾನಗಳು ಶಮನವಾಗಿರೋದ್ರಿಂದ ಸೀಮಾ ಮಸೂತಿ ಅವ್ರಿಗೆ ನಿಂತು ಗೆಲ್ಲಬೇಕು ಅನ್ನೋ ಕನಸು ಇದೆ. ಹಾಗೇನೇ ಜನರ ಬೆಂಬಲ ಕೂಡಾ ಇವ್ರಿಗಿದೆ. ಬಿಜೆಪಿಯ ನಾಯಕರು ಇವ್ರಿಗೆ ಟಿಕೆಟ್ ನೀಡಿದ್ರೆ ಗೆಲ್ಲೋ ಸಾಧ್ಯತೆ ಖಂಡಿತವಾಗ್ಲೂ ಇದೆ.

ಅಮೃತ್ ದೇಸಾಯಿ, ಆಕಾಂಕ್ಷಿ

ಕಳೆದ ಬಾರಿ ಜೆಡಿಎಸ್ ನಿಂದ ಕಣಕ್ಕಿಳಿದು ಕಾಂಗ್ರೆಸ್ ನ ವಿನಯ್ ಕುಲಕರ್ಣಿಗೆ ಟಫ್ ಫೈಟ್ ಕೊಟ್ಟಿದ್ದ ಅಮೃತ್ ದೇಸಾಯಿ ಈ ಬಾರಿ ಬಿಜೆಪಿಗೆ ಸೇರಿದ್ದಾರೆ. ಅಷ್ಟೇ ಅಲ್ಲ ಈ ಬಾರಿ ಅವ್ರು ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಅಮೃತ್ ದೇಸಾಯಿ ಸೇರ್ಪಡೆಯಿಂದ ಬಿಜೆಪಿಗೆ ಎಷ್ಟು ಬಲ ಬಂದಿದೆ ಅನ್ನೋದಕ್ಕಿಂತ ಅವ್ರು ಟಿಕೆಟ್ ಕೇಳ್ತಿರೋದು ನೋಡಿದ್ರೆ ಈ ಬಾರಿ ಕೂಡಾ ಅಸಮಾಧಾನದ ಹೊಗೆ ಜಾಸ್ತಿಯಾಗಬಹುದಾ ಅನ್ನೋ ಅನುಮಾನ ಕೂಡಾ ಕಾಡ್ತಿದೆ.

ತವನಪ್ಪ ಅಷ್ಟಗಿ., ಆಕಾಂಕ್ಷಿ

ಹೌದು ಕಳೆದ ಬಾರಿ ಕೆಜೆಪಿಯಿಂದ ನಿಂತು 3 ನೇ ಸ್ಥಾನ ಪಡೆದಿದ್ದ ತವನಪ್ಪ ಅಷ್ಟಗಿ ಈ ಬಾರಿ ಬಿಜೆಪಿಯಿಂದ ಟಿಕೆಟ್ ಕೇಳ್ತಿದ್ದಾರೆ.

ಯಡೀಯೂರಪ್ಪನವರ ಜತೆ ಗುರುತಿಸಿಕೊಂಡು ಆಪ್ತರಾಗಿರೋದ್ರಿಂದ, ಕಳೆದ ಬಾರಿ ಅವ್ರ ಜತೆಗೆ ಕೆಜೆಪಿಗೆ ಹೋಗಿ ಅಲ್ಲಿಂದ ಕಣಕ್ಕಿಳಿದಿರೋದ್ರಿಂದ ಈ ಬಾರಿ ಬಿಜೆಪಿಯಿಂದ ಟಿಕೆಟ್ ಕೊಡಿ ಅಂತಾ ಯಡಿಯೂರಪ್ಪನವರಿಗೆ ಕೇಳ್ತಿದ್ದಾರೆ. ಹಾಗಾಗಿ ಬಿಎಸ್ವೈ ಕೂಡಾ ಇದನ್ನು ತಳ್ಳಿ ಹಾಕುವಂತಿಲ್ಲ. ಆದ್ರೆ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ಕೊಡ್ತಾರೆ ಅನ್ನೋದನ್ನು ಕಾದು ನೋಡಬೇಕು

ತೆನೆ ಹೊರೋದ್ಯಾರು?

ಹೇಳಿ ಕೇಳಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜೆಡಿಎಸ್ ಹವಾ ದೊಡ್ಡ ಮಟ್ಟದಲ್ಲಿಲ್ಲ. ಕಳೆದ ಬಾರಿ ಬಿಜೆಪಿಯ ಒಳ ಜಗಳದ ಲಾಭ ಪಡೆದಿದ್ದ ಜೆಡಿಎಸ್ ಇಲ್ಲಿ 2 ನೇ ಸ್ಥಾನ ಪಡೆದುಕೊಂಡಿತ್ತು. ಆದ್ರೆ ಆಗ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಮೃತ್ ದೇಸಾಯಿ ಈಗ ಬಿಜೆಪಿ ಪಾಲಾಗಿರೋದ್ರಿಂದ ಜೆಡಿಎಸ್ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗಿದೆ.

ಈಗಾಗಲೇ ಶ್ರೀಕಾಂತ ಜಮುನಾಳ, ಹಾಗೂ ಗುರುರಾಜ ಹುಣಸಿಮರದ ಹೆಸರು ಕೇಳಿ ಬರ್ತಿರೋದ್ರಿಂದ ದಳಪತಿಗಳು ಯಾರಿಗೆ ಟಿಕೆಟ್ ಕೊಡ್ತಾರೆ ಅನ್ನೋದನ್ನು ಕಾದು ನೋಡಬೇಕು.ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,83,290 ಮತದಾರರಿದ್ದಾರೆ. ಇನ್ನು ಇಲ್ಲಿನ ಶಾಸಕ ವಿನಯ್ ಕುಲಕರ್ಣಿ ಅವ್ರೇ ಸಚಿವರಾಗಿರೋದ್ರಿಂದ ಮೇಲ್ನೋಟಕ್ಕೆ ಅವ್ರೇ ಈ ಬಾರಿ ಗೆಲ್ತಾರೆ ಅಂತಾ ಅನ್ಸಿದ್ರೂ ಕೂಡಾ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಜಾಸ್ತಿ ಭಾಗವಹಿಸೋರೋದ್ರಿಂದ ಅದು ಸ್ವಾಭಾವಿಕವಾಗಿ ಕ್ಷೇತ್ರದ ಜನರಲ್ಲಿ ಅಸಮಾಧಾನ ತಂದಿದೆ. ಹಾಗಾಗಿ ಈ ಬಾರಿ ವಿನಯ್ ಕುಲಕರ್ಣಿ ಅವ್ರಿಗೆ ಗೆಲುವು ಸುಲಭವಲ್ಲ

ಪಿನ್ ಪಾಯಿಂಟ್

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೆಗೆದುಕೊಂಡ ನಿರ್ಧಾರ ವಿನಯ್ ಕುಲಕರ್ಣಿ ಅವ್ರಿಗೆ ಪ್ಲಸ್ ಆಗುತ್ತೋ ಬಿಡತ್ತೋ ಆದ್ರೆ ಕ್ಷೇತ್ರವನ್ನು ಕಡೆಗಣಿಸಿರೋದು ಮಾತ್ರ ಮೈನಸ್ ಆಗೋದ್ರಲ್ಲಿ ಡೌಟ್ ಇಲ್ಲ. ಹಾಗಾಗಿ ಈ ಬಾರಿ ವಿನಯ್ ಕುಲಕರ್ಣಿ ಅವ್ರನ್ನು ಸೋಲಿಸಲು ಮುಂದಾಗಿರೋ ಬಿಜೆಪಿ ಇಲ್ಲಿ ಭರ್ಜರಿ ಪ್ರಚಾರ ಮಾಡ್ತಿದೆ. ಕ್ಷೇತ್ರದಲ್ಲಿ ಮೋದಿ ಅಲೆ ಹಾಗೂ ಯಡಿಯೂರಪ್ಪನವ ಅಲೆ ಜೋರಾಗಿದೆ.

ಕೆಜೆಪಿಯೇನೋ ಬಿಜೆಪಿ ಜತೆ ಸೇರಿಕೊಳ್ತು.ಆ ಅಸಮಾಧಾನ ಮುಗಿದೂ ಹೋಯ್ತು. ಆದ್ರೆ ಈ ಬಾರಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇರೋದ್ರಿಂದ ಅದನ್ನು ಬಿಜೆಪಿ ನಾಯಕರು ಹೇಗೆ ನಿಭಾಯಿಸ್ತಾರೆ ಅನ್ನೋದನ್ನು ಕಾದು ನೋಡಬೇಕು. ಒಂದ್ವೇಳೆ ಸೀಮಾ ಮಸೂತಿ, ಹಾಗೂ ಅಮೃತ್ ದೇಸಾಯಿ ಅವ್ರ ಮನವೊಲಿಸಿ ಒಬ್ಹಬರನ್ನೇ ಒಮ್ಮತದಿಂದ ಆಯ್ಕೆ ಮಾಡಿ ಯಾವುದೇ ಅಸಮಾಧಾನವಿಲ್ಲದೇ ಈ ಬಾರಿ ಬಿಜೆಪಿ ಕ್ಷೇತ್ರದಲ್ಲಿ ಸ್ಪರ್ಧೇ ಮಾಡಿದ್ದೇ ಆದಲ್ಲಿ ಸಚಿವ ವಿನಯ್ ಕುಲಕರ್ಣಿ ಸೋಲೋದು ಗ್ಯಾರಂಟಿ ಅಂತಿದ್ದಾರೆ ಈ ಕ್ಷೇತ್ರದ ನಾಡಿಮಿಡಿತ ಬಲ್ಲ ರಾಜಕೀಯ ವಿಶ್ಲೇಷಕರು.