ರಾಜಕೀಯಕ್ಕಾಗಿ ಮಂಡ್ಯವಲ್ಲ – ಮಂಡ್ಯಕ್ಕಾಗಿ ರಾಜಕೀಯ ಸುಮಲತಾ ಅಂಬರೀಷ್ ಅಖಾಡಕ್ಕೆ ಎಂಟ್ರಿ!

Lokhsabha election sumalatha

ಮಂಡ್ಯ ಚುನಾವಣಾ ಅಖಾಡಕ್ಕೆ ಇಳಿಯಲು ಅಂಬರೀಶ್ ಪತ್ನಿ ಸುಮಲತಾ ರೆಡಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆಗೆ ಭೇಟಿ ನೀಡಿದ್ದ ಸುಮಲತಾ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದರು. ಸುಮಲತಾ “ಇದು ನನ್ನ ಪತಿಯ ಊರು, ಈ ಪ್ರೀತಿ ವಿಶ್ವಾಸ ಬಿಟ್ಟು ಬೇರೆಲ್ಲಿ ಹೋಗಲಿ.ಅಂಬಿಯ ಪ್ರೀತಿಯ ಋಣ ತೀರಿಸಲು ಒಂದು ಅವಕಾಶ ಸಿಕ್ಕರೆ ಖಂಡಿತ ತೀರಿಸುವೆ” ಎಂದು ಹೇಳಿದರು.

Lokhsabha election sumalatha

ಸಿದ್ದರಾಮಯ್ಯ ಅವರ ಬಳಿಯೂ ಸಹ ಅಭಿಮಾನಿಗಳ ಒತ್ತಾಯ ಮೇರೆಗೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದೇನೆ. ಆದರೆ ಇನ್ನು ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಂಬರೀಶ್ ಅವರ ಸೇವೆ ಇದೆ ಹಾಗಾಗಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವ ಆಸಕ್ತಿ ಇದೆ ಎಂದರು

Lokhsabha election sumalatha

ರಾಜಕೀಯಕ್ಕೆ ಬರಬೇಕೆಂದು ನಾನು ಮಂಡ್ಯಕ್ಕೆ ಬಂದಿಲ್ಲ – ಮಂಡ್ಯಕ್ಕೆ ಬರಬೇಕೆಂದೇ ರಾಜಕೀಯಕ್ಕೆ ಬರಲು ನಿರ್ಧಾರ ಮಾಡಿದ್ದೇನೆ ಎಂದು ಸ್ಪಷ್ಟನೆ ಕೊಟ್ಟರು.

ಕಾಂಗ್ರೆಸ್​ನಿಂದ ಕಣಕ್ಕಿಳಿಯಲು ಟಿಕೆಟ್ ಕೇಳಿರೋ ಸುಮಲತಾ ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆಗೆ ಭೇಟಿ ನೀಡಿ ಮನೆದೇವರಿಗೆ ಪೂಜೆ ಸಲ್ಲಿಸಿದರು . ಪುತ್ರ ‘ಅಭಿಷೇಕ್​​​’ ನಿರ್ಮಾಪಕ ‘ರಾಕ್​ಲೈನ್​​​ ವೆಂಕಟೇಶ್​’ ಸುಮಲತಾಗೆ ಬೆನ್ನೇಲುವಾಗಿ ನಿಂತಿದ್ದರು . ಆ ಸಮಯದಲ್ಲಿ ನೂರಾರು ಜನ ಗ್ರಾಮಸ್ಥರು ಸುಮಲತರಿಗೆ ಸ್ವಾಗತ ಕೋರಿದರು. ಕಾಲಭೈರವೇಶ್ವರ ದೇಗುಲದ ಬಸವನಿಗೆ ನಮಿಸಿ ಮನೆದೇವರ ಪೂಜೆಯ ನಂತರ ಸುಮಲತಾ ಅವರು ಹುತಾತ್ಮ ಯೋಧ ಗುರು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಇದೇ ವೇಳೆ ತಮ್ಮ ಪುತ್ರ ಅಭಿಷೇಕ್​​ ಹೆಸರಿನಲ್ಲಿರೋ 22 ಗುಂಟೆ ಭೂಮಿಯನ್ನು ಯೋಧನ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.

ಈ ಮಧ್ಯೆ ಹುಬ್ಬಳ್ಳಿಯಲ್ಲಿ ಸುಮಲತಾ ಸ್ಪರ್ಧೆ ವಿಚಾರವಾಗಿಯೇ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಇನ್ನೂ ಸುಮಲತಾಗೆ ಟಿಕೆಟ್ ನೀಡೋ ಬಗ್ಗೆ ನಿರ್ಧಾರ ಆಗಿಲ್ಲ ಎಂದು ಹೇಳಿದರು.