ನಾವು ಭಾರತೀಯರಲ್ವೇ ? ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಅಂಬರೀಶ್ !

Mahadayi Issue: Actor Ambareesh React on Media At Bengaluru.
Mahadayi Issue: Actor Ambareesh React on Media At Bengaluru.

ಕರ್ನಾಟಕದವರು ಭಾರತೀಯರಲ್ವಾ? ಸ್ವಾರ್ಥ ಬಿಟ್ಟರೇ ಮಹದಾಯಿ ಸಮಸ್ಯೆ ಪರಿಹಾರವಾಗುತ್ತದೆ. ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಮೋದಿ ಭೇಟಿ ನೀಡಿ ನಾನಿದ್ದೇನೆ ಎಂದು ತಮಿಳರಿಗೆ ಭರವಸೆ ನೀಡಿದ್ದರು.

ಆದರೇ ಕರ್ನಾಟಕದ ಕಡೆ ಮೋದಿ ಯಾಕೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ನಟ ಹಾಗೂ ಮಾಜಿ ಸಚಿವ ಅಂಬರೀಶ್​ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅಂಬರೀಶ್​, ಪ್ರಧಾನಿ ನರೇಂದ್ರ ಮೋದಿಗೆ ನಟ, ಶಾಸಕ ಅಂಬರೀಶ್ ಪ್ರಶ್ನೆ. ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಭೇಟಿ ನೀಡಿ ಸಾಂತ್ವನ ಹೇಳಿದ ಮೋದಿ ಕರ್ನಾಟಕಕ್ಕೆ ಭೇಟಿ ನೀಡಲಿಲ್ಲ. ತಮಿಳುನಾಡಿನಲ್ಲಿ ಎಷ್ಟು ಜನ ಬಿಜೆಪಿ ಸಂಸದರು ಇದ್ದಾರೆ? ಕರ್ನಾಟಕದಲ್ಲಿ ಎಷ್ಟು ಜನ ಇದ್ದಾರೆ? ಹಾಗಿದ್ದು ಕರ್ನಾಟಕದತ್ತ ಮೋದಿ ನಿರ್ಲಕ್ಷ್ಯ ಯಾಕೆ? ಜನಪ್ರತಿನಿಧಿಗಳು ಸ್ವಾರ್ಥಬಿಟ್ಟರೇ ಮಹದಾಯಿ ವಿಚಾರ ಒಂದು ನಿಮಿಷದಲ್ಲಿ ಪರಿಹಾರವಾಗುತ್ತದೆ ಎಂದರು.

 

ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಅಂಬರೀಶ್​, ರಜನೀಕಾಂತ್ ರಾಜಕೀಯದಲ್ಲಿ ಗೆಲ್ಲುತ್ತಾರೆ. ಇವತ್ತೇ ಬರೆದು ಇಟ್ಟುಕೊಳ್ಳಿ. ರಜನೀಕಾಂತ್ ಪಕ್ಕಾ ವಿನ್ನರ್ ಎಂದು ಅಂಬರೀಶ್​​ ಭವಿಷ್ಯ ನುಡಿದಿದ್ದಾರೆ. ಇಷ್ಟು ದಿನಗಳ ಕಾಲ ಸಕ್ರಿಯ ರಾಜಕಾರಣ ಹಾಗೂ ಅಧಿವೇಶನದಿಂದಲೂ ದೂರ ಉಳಿದ ಅಂಬರೀಶ್​ ಇದೀಗ ಚುನಾವಣೆ ಎದುರಿನಲ್ಲಿ ಸಕ್ರಿಯವಾಗಿದ್ದು, ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.