ಮಹದಾಯಿ ನೀರಿನ ಹೆಸರಲ್ಲಿ ಕಾಂಗ್ರೆಸ್-ಬಿಜೆಪಿ ಹೈಡ್ರಾಮಾ- ಬಂಧನಕ್ಕೊಳಗಾದ ಬಿಜೆಪಿ ನಾಯಕರು!!

Mahadayi Protest: BJP Leaders Arrested in Bengaluru.
Mahadayi Protest: BJP Leaders Arrested in Bengaluru.

ಮಹದಾಯಿ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್​ ಹೈಡ್ರಾಮಾ ಮುಗಿಲುಮುಟ್ಟಿದೆ. ಒಂದೆಡೆ ಉತ್ತರ ಕರ್ನಾಟಕ ಭಾಗದ ರೈತರು ಕುಡಿಯುವ ನೀರಿಗಾಗಿ ನಡೆಸುತ್ತಿದ್ದ ಹೋರಾಟ ಕೈಬಿಟ್ಟು ರಾಜಭವನ ಸೇರಿ ಹಲವೆಡೆ ಮನವಿ ನೀಡಿ ತಮ್ಮ ಊರಿಗೆ ವಾಪಸ್ಸಾಗಲು ಸಿದ್ಧತೆ ನಡೆಸುತ್ತಿದ್ದರೇ ಇತ್ತ ಬಿಜೆಪಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಯತ್ನ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

ad


ಮಹದಾಯಿ ನೀರಿಗಾಗಿ ರೈತರು ಮಲ್ಲೆಶ್ವರಂ ಕಚೇರಿ ಎದುರು ನಾಲ್ಕು ದಿನಗಳ ಕಾಲ ನಡೆಸಿದ ಹೋರಾಟ ಕಾಂಗ್ರೆಸ್ ಪ್ರೇರಿತ ಎಂದು ಬಿಜೆಪಿ ಆರೋಪಿಸಿತ್ತು. ಇದ್ರ ಮಧ್ಯೆ ಕೂಡ ನಿನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಪ್ರತಿಭಟನಾನಿರತರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಅದು ವಿಫಲವಾದ ಬೆನ್ನಲ್ಲೇ ಇಂದು ಬಿಜೆಪಿ ಕಾಂಗ್ರೆಸ್​ ಕಚೇರಿ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿತು.ಸಂಸದೆ ಶೋಭಾ ಕರಂದ್ಲಾಜೆ, ಮಾಜಿಉಪಮುಖ್ಯಮಂತ್ರಿ ಆರ್.ಅಶೋಕ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಇದೇ ವೇಳೆ ಕೆಪಿಸಿಸಿ ಕಚೇರಿ ಎದುರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.

 

 

ಈ ಮಧ್ಯೆ ಪೊಲೀಸರು ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಗಲಾಟೆ ತಪ್ಪಿಸಲು ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವುದನ್ನು ತಪ್ಪಿಸಲು ಯತ್ನಿಸಿದರು. ಬ್ಯಾರಿಕೇಡ್​ಗಳನ್ನು ಹಾಕಿ ಕಾರ್ಯಕರ್ತರನ್ನು ನಿಯಂತ್ರಿಸಲಾಯಿತು. ಆದರೇ ಇದಕ್ಕೆ ಬಗ್ಗದ ಬಿಜೆಪಿ ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಅವರನ್ನು ಬಂಧಿಸಿ ಬಸ್​ನಲ್ಲಿ ಕರೆದೊಯ್ಯಲಾಯಿತು. ಈ ವೇಳೆ ಬಂಧನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಿರೋಧ ವ್ಯಕ್ತಪಡಿಸಿ ನೆಲದಲ್ಲಿ ಬಿದ್ದರೂ ಪೊಲೀಸರು ಬಲವಂತವಾಗಿ ಎಳೆದಾಡಿ ಬಸ್​ ಹತ್ತಿಸಿ ಬಂಧಿಸಿ ಕರೆದೊಯ್ದರು. ಒಟ್ಟಿನಲ್ಲಿ ಮಹದಾಯಿ ನೀರಿನ ಹೋರಾಟ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವಿನ ಕಿತ್ತಾಟಕ್ಕೆ ಸಾಕ್ಷಿಯಾಯಿತು.