ಸಿಎಂ ಸಿದ್ದರಾಮಯ್ಯ “ಝೀರೋ” ಖದರ್ ಗೆ ಮಹಿಳೆ ಕಂಗಾಲು !!!

ಮನುಷ್ಯನ ಘನತೆ ಗೌರವಕ್ಕಿಂತ ಜೀವ ಮುಖ್ಯ ಅಲ್ವಾ. ಆದರೇ ನಮ್ಮ ಜನರಿಗೆ ಇದು ಅರ್ಥನೇ ಆಗೋದಿಲ್ಲ ಅನ್ಸುತ್ತೆ. ನೂರಾರು ಭಾರಿ ಅಂಬುಲೆನ್ಸ್​​ ಗೆ ದಾರಿ ಮಾಡಿಕೊಡಿ. ಜೀವ ಉಳಿಸಿ ಎಂದು ಹೇಳಿದ ಮೇಲೂ ಸಿಎಂಗೆ ದಾರಿ ಮಾಡಿಕೊಡುವ ಅಬ್ಬರದಲ್ಲಿ ಪೊಲೀಸರು ಅಮಾನವೀಯತೆ ಮೆರೆದಿದ್ದು, ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ರೋಗಿಯನ್ನು ತಡೆದಿದ್ದಾರೆ.

adನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಿಎಂ ಕಾರ್ಯಕ್ರಮವಿತ್ತು. ನಾಗಮಂಗಲದ ಸ್ಡೇಡಿಯಂಗೆ ಹೆಲಿಕ್ಯಾಪ್ಟರ್​​ಗೆ ಬಂದಿಳಿದ ಸಿಎಂ ಅಲ್ಲಿಂದ ಕಾರ್ಯಕ್ರಮದ ಸ್ಥಳಕ್ಕೆ ತೆರಳುತ್ತಿದ್ದರು. ಈ ವೇಳೆ ಸ್ಥಳದಲ್ಲಿ 2 ಕಿಲೋಮೀಟರ್​​ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಅಲ್ಲಿಯೇ ಸಮೀಪದಲ್ಲಿದ್ದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ಮಹಿಳೆಯೊರ್ವಳನ್ನು ಕರೆತರಲಾಗಿತ್ತು. ಆದರೇ ಎಷ್ಟು ಮನವಿ ಮಾಡಿದರೂ ಪೊಲೀಸರು ಅಂಬುಲೆನ್ಸ್​ಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ರೋಗಿಯ ಸಂಬಂಧಿಗಳು ಆಕೆಯನ್ನು ಸುಮಾರು 500 ಮೀಟರ್​ನಷ್ಟು ದೂರ ನಡೆಸಿಕೊಂಡೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.


ಹೀಗೆ ರೋಗಿಗೆ ಹಿಂಸೆ ನೀಡಿದ್ದನ್ನು ಸಾರ್ವಜನಿಕರು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ ಕೇವಲ ಸಿಎಂ ಮೆಚ್ಚಿಸುವುದಕ್ಕಾಗಿ ರೋಗಿಯ ಜೊತೆ ಅಮಾನೀಯವಾಗಿ ನಡೆದುಕೊಂಡ ಪೊಲೀಸರಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.