ಮಂಜೇಗೌಡರ ರಾಜೀನಾಮೆಗೆ ವಿಘ್ನ !! ಎಚ್ ಡಿ ರೇವಣ್ಣಗೆ ವರವಾದ “ಅಭಿಪ್ರಾಯ” !!

Manje Gowda Struggle For Resignation.

ಕಾಂಗ್ರೆಸ್ ನ ಹೊಳೆನರಸೀಪುರದ ಘೋಷಿತ ಅಭ್ಯರ್ಥಿ ಮಂಜೇಗೌಡರ ರಾಜೀನಾಮೆ ಅಂಗೀಕಾರಕ್ಕೆ ರಾಜ್ಯದ ಕಾನೂನು ಇಲಾಖೆ ಅಡ್ಡಿಯಾಗಿದೆ. ಹಲವು ಪ್ರಕರಣ ಎದುರಿಸುತ್ತಿರುವ ಆರ್ ಟಿ ಒ ಇನ್ಸ್ ಸ್ಪೆಕ್ಟರ್ ಮಂಜೇಗೌಡರ ರಾಜೀನಾಮೆ ಅಂಗೀಕರಿಸೋದು ಸಮಂಜಸವಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ.

ad

ಹೌದು. ಹೊಳೇನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಸರ್ಕಾರಿ ಹುದ್ದೆಗೆ ನೀಡಿದ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ.ಸಾರಿಗೆ ಇಲಾಖೆಯಲ್ಲಿ ಹಿರಿಯ ವಾಹನ ನಿರೀಕ್ಷಕರಾಗಿರುವ ಮಂಜೇಗೌಡ, 2017ರ ನವೆಂಬರ್ 3ರಂದು ಹುದ್ದೆಗೆ ರಾಜೀನಾಮೆ ನೀಡಿದ್ದರು.ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ರಾಜೀನಾಮೆ ಸಂಬಂಧಿಸಿದ ಕಡತಕ್ಕೆ ಒಪ್ಪಿಗೆ ನೀಡಿದೆ. ಆದರೆ ಕಾನೂನು ಇಲಾಖೆ ತನ್ನ ಅಭಿಪ್ರಾಯದಲ್ಲಿ ರಾಜೀನಾಮೆ ಅಂಗೀಕರಿಸದಂತೆ ಸೂಚಿಸಿದೆ. ಹೀಗಾಗಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಮಂಜೇಗೌಡ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಸಕ್ತಿ ಹೊಂದಿದ್ದು, ಅವರಿಬ್ಬರ ಮಧ್ಯೆ ನಡೆದ ಮೊಬೈಲ್‌ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮಂಜೇಗೌಡ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲೋಕಾಯುಕ್ತ ವಿಚಾರಣೆ ಬಾಕಿ ಇದೆ. ಈ ಕಾರಣಕ್ಕೆ ರಾಜೀನಾಮೆಗೆ ಕಾನೂನು ಇಲಾಖೆ ಆಕ್ಷೇಪವ್ಯಕ್ತಪಡಿಸಿದೆ.ಸರಕಾರಿ ನೌಕರರಾಗಿ ಮಂಜೇಗೌಡರು ಗಣಿ ಹಗರಣ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣ, ಲೋಕಾಯುಕ್ತ ಪ್ರಕರಣ ಎದುರಿಸುತ್ತಿದ್ದಾರೆ. ಆದ್ದರಿಂದ ಸರಕಾರಿ ನೌಕರಿಗೆ ರಾಜೀನಾಮೆ ಸಲ್ಲಿಸಿದರೂ ಅಂಗೀಕರಿಸಬಾರದು ಎಂದು ಕಾನೂನು ಇಲಾಖೆಅಭಿಪ್ರಾಯ ವ್ಯಕ್ತಪಡಿಸಿದೆ. ಇದು ಮಂಜೇಗೌಡರ ಚುನಾವಣಾ ಪ್ರಚಾರಕ್ಕೆಅಡ್ಡಿಯಾಗಿದೆ.