ಸ್ವಾಮೀಜಿಗಳ ರಾಜಕೀಯ ಪ್ರವೇಶಕ್ಕೆ ಮಂತ್ರಾಲಯ ಶ್ರೀ ವಿರೋಧ!!

ಇತ್ತೀಚಿಗಷ್ಟೆ ಉತ್ತರ ಕರ್ನಾಟಕದ ವಿವಿಧ ಮಠಗಳ ಮಠಾಧೀಶರುಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಮಂತ್ರಾಲಯದ ಪೀಠಾಧಿಪತಿಗಳಾದ ಸುಭುದೇಂದ್ರ ತೀರ್ಥರು ಸ್ವಾಮೀಜಿಗಳ ರಾಜಕೀಯ ಪ್ರವೇಶವನ್ನು ವಿರೋಧಿಸಿದ್ದಾರೆ.

ad


ಧರ್ಮದಲ್ಲಿ ರಾಜಕೀಯ ಬರಬಾರದು. ರಾಜಕೀಯದಲ್ಲಿ ಧರ್ಮ ಬಂದರೆ ದೇಶ ಸುಭಿಕ್ಷವಾಗುತ್ತದೆ. ಹೀಗಾಗಿ ಸ್ವಾಮೀಜಿಗಳು ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು. ಶೈಕ್ಷಣಿಕವಾಗಿ,ಆರೋಗ್ಯ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಸೇವೆ ಸಲ್ಲಿಸಬೇಕು. ಅದನ್ನು ಬಿಟ್ಟು ಕಾವಿದಾರಿಗಳು ರಾಜಕೀಯ ಪ್ರವೇಶ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.

ವೈಯಕ್ತಿಕವಾಗಿ ಯಾವ-ಯಾವ ಮಠದ ಸ್ವಾಮೀಜಿಗಳು ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆದರೇ ಯಾರೆ ಆದರೂ ರಾಜಕೀಯಕ್ಕೆ ಪ್ರವೇಶಿಸುವುದು ಸರಿಯಲ್ಲ. ಧರ್ಮ-ರಾಜಕಾರಣ ಎರಡು ಬೇರೆಯದೇ ವಿಚಾರಗಳು. ಹೀಗಾಗಿ ಸ್ವಾಮೀಜಿಗಳು ರಾಜಕೀಯ ಪ್ರವೇಶಿಸುವುದು ಸರಿಯಲ್ಲ ಎಂದು ಸುಭುದೇಂದ್ರತೀರ್ಥರು ಹೇಳಿದ್ದಾರೆ. ಇದರಿಂದಾಗಿ ರಾಜಕೀಯ ಪ್ರವೇಶಿಸುವ ಕನಸಿನಲ್ಲಿರುವ ಮಠಾಧೀಶರಿಗೆ ಮಂತ್ರಾಲಯ ಶ್ರೀಗಳು ತಿಳುವಳಿಕೆ ಹೇಳಿದಂತಾಗಿದೆ. ಇನ್ನು ಈ ಬಗ್ಗೆ ರಾಜ್ಯದಲ್ಲಿ ಮತ್ತೆ ಒಂದು ಚರ್ಚೆಯಾಗುವ ಸಾಧ್ಯತೆ ಇದೆ.