ಜಮೀರ್ ವಿರುದ್ದ ಗೌಡರ ಖಾನಾಸ್ತ್ರ !! ತೆನೆ ಹೊತ್ತ ಅಲ್ತಾಫ್ ಖಾನ್ !!

MASTER EXCLUSIVE: Deve Gowda's Master Plan to Defeat Zameer Ahmed.
MASTER EXCLUSIVE: Deve Gowda's Master Plan to Defeat Zameer Ahmed.

ಜೆಡಿಎಸ್ ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿರುವ ಏಳು ಮಾಜಿ ಶಾಸಕರ ಪೈಕಿ ದೇವೇಗೌಡರ ಟಾರ್ಗೆಟ್ ಜಮೀರ್ ಮತ್ತು ಚೆಲುವರಾಯಸ್ವಾಮಿ.

ಈಗಾಗಲೇ ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮ್ಮದ್ ಖಾನ್ ವಿರುದ್ದ ಚಕ್ರವ್ಯೂಹ ಸಿದ್ದಪಡಿಸಿದ್ದಾರೆ.ಹೌದು. ಜೆಡಿಎಸ್​ಗೆ ಕೈಕೊಟ್ಟು ಕಾಂಗ್ರೆಸ್ ಸೇರಿರೋ ಜಮೀರ್ ಸೋಲಿಸಲು ಪಣ ತೊಟ್ಟಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜಮೀರ್ ಆಪ್ತ ಕಾಂಗ್ರೆಸ್​ನ ಅಲ್ತಾಫ್ ಖಾನ್​ರನ್ನೇ ಸೆಳೆದಿದ್ದಾರೆ.ಅಲ್ತಾಫ್ ಇಂದು ಜೆಡಿಎಸ್ ಸೇರ್ಪಡೆಯಾಗಿದ್ದು ಚಾಮರಾಜಪೇಟೆ ಅಭ್ಯರ್ಥಿ ಆಗುವುದು ಖಚಿತವಾಗಿದೆ.

ಕಾಂಗ್ರೆಸ್ ಮುಖಂಡರಾಗಿದ್ದ ಅಲ್ತಾಫ್ ಖಾನ್ ಚಾಮರಾಜಪೇಟೆಯಲ್ಲಿ ಪ್ರಭಾವಿ ಮುಖಂಡ. ಪತ್ನಿ ಸೀಮಾ ಅಲ್ತಾಫ್ ಜನಾನುರಾಗಿ ಬಿಬಿಎಂಪಿ ಸದಸ್ಯೆಯಾಗಿದ್ದಾರೆ.ಒಕ್ಕಲಿಗರು ಮತ್ತು ಮುಸ್ಲೀಮರ ಪ್ರಾಬಲ್ಯ ಹೊಂದಿರುವ ಚಾಮರಾಜಪೇಟೆಯಲ್ಲಿ ಮುಸ್ಲೀಮರ ಮತಗಳ ಜೊತೆ ಒಕ್ಕಲಿಗರ ಮತಗಳೂ ಜೆಡಿಎಸ್ ಜೊತೆ ಸೇರಿಕೊಂಡರೆ ಅಲ್ತಾಫ್ ಖಾನ್ ಚುನಾವಣೆಯಲ್ಲಿ ಜಮೀರ್ ಗೆ ಗುದ್ದು ನೀಡಲಿದ್ದಾರೆ.