ವೇಶ್ಯಾವಾಟಿಕೆ ಜಾಲದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇಸ್ಟ್​ – ಸಿದ್ದು- ಡಾ.ಪರಂ ನಡುವಿನ ಮುನಿಸಿಗೆ ಬಲಿಯಾದ್ರಾ ರಾಮಕೃಷ್ಣ?

MASTER EXCLUSIVE: Kempayya's conspiracy against G.Parameshwar

ರಾಜ್ಯದಲ್ಲಿ ಇನ್ನು ಅಧಿಕೃತವಾಗಿ ಚುನಾವಣೆ ಘೋಷಣೆಯಾಗದೇ ಇದ್ದರೂ ಚುನಾವಣಾ ರಾಜಕೀಯ ಗರಿಗೆದರಿದೆ.

 

ಈಗಾಗಲೇ ಪಕ್ಷ-ಪಕ್ಷಗಳ ನಡುವೆ ಹಾಗೂ ಪಕ್ಷಗಳ ಒಳಗಡೆಯೇ ಕಾಲೆ ಎಳೆಯುವ ರಾಜಕೀಯ ಆರಂಭವಾಗಿದ್ದು, ಇದಕ್ಕೆ ತುಮಕೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಮೊದಲ ಬಲಿಯಾಗಿದ್ದಾರೆ. ಡಿಸಿಸಿ ಅಧ್ಯಕ್ಷನನ್ನು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಸಿ ಪಕ್ಷದಿಂದ ಉಚ್ಛಾಟಿಸುವ ಮೂಲಕ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬಯಲಿದೆ ಬಂದಂತಾಗಿದೆ.
ಹೌದು ಕಾಂಗ್ರೆಸ್​​ನ ಪ್ರಭಾವಿ ನಾಯಕ ಸಿಎಂ ಸಿದ್ದು ಹಾಗೂ ದಲಿತ ನಾಯಕ ಪರಂ ನಡುವಿನ ಗದ್ದುಗೆ ಫೈಟ್​​ನಲ್ಲಿ ತುಮಕೂರು ಡಿಸಿಸಿ ಅಧ್ಯಕ್ಷ ಪರಮೇಶ್ವರ್​ ಬಲಿಪಶುವಾಗಿದ್ದಾರೆ. ಕಳೆದ ಎಲೆಕ್ಷನ್​ನಲ್ಲಿ ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಟೀಂ ಕಾರಣವಾಗಿದೆ ಎಂದು ಗಂಭೀರ ಆರೋಪವಿತ್ತು.

 

ಈ ಸಲವೂ ಎಲೆಕ್ಷನ್​ನಲ್ಲಿ ಪರಮೇಶ್ವರ್ ಸೋಲಿಸಲು ಪ್ಲ್ಯಾನ್ ಮಾಡಿರುವ ಸಿಎಂ ಸಿದ್ದ ತಂಡ ಡಾ.ಪರಮೇಶ್ವರ್​​ ಬಲಗೈ ಬಂಟನಾಗಿರುವ ರಾಮಕೃಷ್ಣ ಅವರನ್ನು ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿಸುವ ಮೂಲಕ ಪರಂಗೆ ಮೊದಲ ಹೊಡೆತ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ರಾಮಕೃಷ್ಣ ಅವರನ್ನು ಸಿಎಂ ಸಿದ್ದು ತಂಡ ಹಿಂಬಾಲಿಸುತ್ತಿತ್ತು ಎನ್ನಲಾಗಿದೆ. ಅಲ್ಲದೇ ಸಿಸಿಬಿ ತಂಡವನ್ನು ಕೂಡ ರಾಮಕೃಷ್ಣ ಅವರ ಹಿಂಬಾಲಿಸಲು ಬಿಡಲಾಗಿತ್ತು. ಇದರ ಹಿಂದೆ ಭ್ರಷ್ಟ ಐಪಿಎಸ್​ ಅಧಿಕಾರಿ ಕೆಂಪಯ್ಯ ಕಾರ್ಯಪ್ರವೃತ್ತರಾಗಿ ಸಿಸಿಬಿಯ ತಮ್ಮ ಆಪ್ತ ಎಸಿಪಿ ಮೋಹನಕುಮಾರ್​​​ ರಾಮಕೃಷ್ಣ ಬಲಿ ಹಾಕುವ ಕೆಲಸ ವಹಿಸಿದ್ದರು ಎನ್ನಲಾಗಿದೆ.
ಒಂದು ವಾರಕ್ಕೂ ಮೊದಲೇ ರಾಮಕೃಷ್ಣ ಮೇಲೆ ರೇಡ್​ಗೆ ಸಂಚು ರೂಪಿಸಲಾಗಿತ್ತು.

 

ಪರಂ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ರಾಮಕೃಷ್ಣ ಬೆಂಗಳೂರಿಗೆ ಬಂದಿರಲಿಲ್ಲ. ಮೊನ್ನೆ ರಾಮಕೃಷ್ಣ ಸ್ನೇಹಿತನ ಮನೆಗೆ ಬಂದ ವೇಳೆ ಸಮಯ ಸಾಧಿಸಿ ರೇಡ್​ ಮಾಡಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.
ಮೂಲಗಳ ಪ್ರಕಾರ ಡಾ.ಜಿ.ಪರಮೇಶ್ವರ್ ಆಪ್ತರಾಗಿರುವ ರಾಮಕೃಷ್ಣ ಕೊರಟಗೆರೆಯಲ್ಲಿ ಒಳ್ಳೆಯ ಹಿಡಿತ ಹೊಂದಿದ್ದಾರೆ.ಈ ಭಾರಿ ಪರಮೇಶ್ವರ್ ಗೆಲುವಿಗೆ ರಣತಂತ್ರ ರೂಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಐಎಎಸ್​​ ಕೆಂಪಯ್ಯನ ಬುದ್ಧಿವಂತಿಕೆ ಬಳಸಿಕೊಂಡು ಸಿಎಂ ಸಿದ್ದರಾಮಯ್ಯ ರಾಮಕೃಷ್ಣರನ್ನು ಮಣಿಸಿ ಪರಂಗೆ ಏಟು ನೀಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.