ರಾಜ್ಯ ಕಾಂಗ್ರೆಸ್​​ ಎದೆಯಲ್ಲಿ ನಡುಕ ಹುಟ್ಟಿಸಿದ ಮಹಿಳೆ ಯಾರು ಗೊತ್ತಾ? ಇಷ್ಟಕ್ಕೂ ಕಾಂಗ್ರೆಸ್​ ಆಕೆಗೆ ಹೆದರ್ತಿರೋದು ಯಾಕೆ ಗೊತ್ತಾ?

MEP Party Leader Dr. Nowhera Shaik Speech in Kolar.

ಕರ್ನಾಟಕದಲ್ಲಿ ಇನ್ನೇನು ವಿಧಾಸಭಾ ಕುರುಕ್ಷೇತ್ರಕ್ಕೆ ದಿನಗಣನೆ ನಡೆದಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ ನೇತೃತ್ವದ ಸರ್ಕಾರ ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಲು ಸರ್ಕಸ್​ ನಡೆಸಿದೆ. ಹೀಗೆ ಕಾಂಗ್ರೆಸ್​ ಅಧಿಕಾರ ಬೇಟೆಯ ಕನಸಿನಲ್ಲಿರುವಾಗಲೇ ಮಹಿಳೆಯೊಬ್ಬಳು ಕಾಂಗ್ರೆಸ್ಸಿಗರ ನಿದ್ದೆಗೆಡಿಸಿದ್ದಾಳೆ. ಯಾರಾ ಆ ಮಹಿಳೆ ಅಂದ್ರಾ ಈ ಸ್ಟೋರಿ ನೋಡಿ.  ಕರ್ನಾಟಕ ಕಾಂಗ್ರೆಸ್​ನ್ನು ನಡುಗಿಸುತ್ತಿರುವ ಮಹಿಳೆ ಯಾರು ಗೊತ್ತಾ? ಆಕೆಯೇ ಡಾ.ನೌಹೀರಾ ಶೇಖ್​. ಈಕೆ ಮಹಿಳಾ ಎಂಪವರ್​ಮೆಂಟ್​ ಹೆಸರಿನಲ್ಲಿ ಹೊಸದೊಂದು ಪಕ್ಷ ಸ್ಥಾಪಿಸಿದ್ದು, ವಜ್ರ ಆಕೆಯ ಪಕ್ಷದ ಗುರುತು. ಮೂಲಗಳ ಪ್ರಕಾರ ಡಾ.ನೌಹೀರಾ ಶೇಖ್​, ಹೈದ್ರಾಬಾದ್​ ಮೂಲದ ಹೀರಾ ಗ್ರೂಪ್​​​ನ ಒಡತಿಯಾಗಿದ್ದು, ಸಂಸದ ಅಸಾದುದ್ದೀನ ಓವೈಸಿ ಆಪ್ತೆ ಎನ್ನಲಾಗಿದೆ.

 

 

ಒಂದು ಮೂಲದ ಪ್ರಕಾರ ಓವೈಸಿಯ ಆಪ್ತೆಯಾಗಿರುವ ನೌಹೀರಾ ಶೇಖ್​​ನ್ನು ಬಿಜೆಪಿಯೇ ರಾಜ್ಯಕ್ಕೆ ಕರೆಸಿದ್ದು, ಇದು ಕರ್ನಾಟಕ ಬಿಜೆಪಿ ಹಾಗೂ ಓವೈಸಿ ನಡುವಿನ ಮಾತುಕತೆಯ ಫಲಶೃತಿ ಎನ್ನಲಾಗುತ್ತಿದೆ. ಕರ್ನಾಟಕ ಕಾಂಗ್ರೆಸ್​ ನ ಮತವಿಭಜನೆಯ ಗುರಿ ಹೊಂದಿರುವ ಡಾ.ನೌಹೀರಾ ಶೇಖ್​, ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಹೆಚ್ಚಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ.  ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕವಾಗಿರೋದರಿಂದ ಮುಸ್ಲಿಂ ಮತಗಳೇ ನಿರ್ಣಾಯಕ. ಹೀಗಾಗಿ ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್​​ನವರ ಮತವನ್ನು ಬೇಟೆಯಾಡುವ ಉದ್ದೇಶ ಮಹಿಳಾ ಎಂಪವರಮೆಂಟ್​​ ಪಕ್ಷದ್ದು.

 

ಆ ಮೂಲಕ ಬಿಜೆಪಿಯ ಮಿಷನ್​ 150 ಗೆ ನೆರವಾಗುವ ಉದ್ದೇಶವನ್ನು ಬಿಜೆಪಿ ಹೊಂದಿದ್ದು, ಅದಕ್ಕಾಗಿ ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಡಾ.ನೌಹೀನಾ ಬೆಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದು, ಹಲವರನ್ನು ಭೇಟಿ ಮಾಡಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾಳೆ ಎನ್ನಲಾಗಿದೆ. ಅಲ್ಲದೇ ನಗರದ ಹಲವೆಡೆ ಬೃಹತ್ ಫ್ಲೆಕ್ಸ್​ಗಳನ್ನು ಹಾಕಲಾಗುತ್ತಿದೆ.
ಈ ಮಧ್ಯೆ ನೌಹೀರಾ ಶೇಖ್​ ವಿರುದ್ಧ ಕೆಂಗಣ್ಣು ಬೀರಿರುವ ರಾಜ್ಯ ಸರ್ಕಾರ ಎಸಿಬಿ ಮತ್ತು ಸಿಐಡಿ ಮೂಲಕ ರಹಸ್ಯ ಮಾಹಿತಿ ಕಲೆ ಹಾಕಿಸುತ್ತಿದೆ. ಅಲ್ಲದೇ ಪ್ರಕರಣವೊಂದರಲ್ಲಿ ಸಿಲುಕಿಸಿ ಡಾ.ನೌಹೀನಾ ಬಂಧಿಸಲು ಕೂಡ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಮೂಲಗಳ ಪ್ರಕಾರ ಬಿಟಿವಿನ್ಯೂಸ್​ಗೆ ಲಭ್ಯವಾಗಿದೆ. ಒಟ್ಟಿನಲ್ಲಿ ಚುನಾವಣೆ ಗೆಲ್ಲಲು ರಾಷ್ಡ್ರೀಯ ಪಕ್ಷಗಳು ಇಂತಹ ವಾಮಮಾರ್ಗಗಳ ಮೊರೆ ಹೋಗಿರೋದು ಮಾತ್ರ ದುರಂತವೇ ಸರಿ.