ಕಾಂಗ್ರೆಸ್​ ಎಮ್​ಎಲ್​ಎ ಮಗನಿಂದ ಹಲ್ಲೆ ಆಯ್ತು- ಈಗ ಸಚಿವ ಕೃಷ್ಣ ಭೈರೈಗೌಡರ್​ ಬೆಂಬಲಿಗರಿಂದ ಹಲ್ಲೆ!

Minister Krishna Bhairagowda's supporter Assault against BJP Activist.

ಸಿಲಿಕಾನ ಸಿಟಿಯಲ್ಲಿ ದೊಡ್ಡವರಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದ್ದು,

 

ಎಮ್​ಎಲ್​ಎ ಹ್ಯಾರಿಸ್​​ ಪುತ್ರನ ಗೂಂಡಾಗಿರಿ ಮಾಸುವ ಮುನ್ನವೇ ಸಚಿವ ಕೃಷ್ಣಭೈರೆಗೌಡ್​​ರ ಬೆಂಬಲಿಗರು ದೌರ್ಜನ್ಯ ಮೆರೆದಿದ್ದು, ಸಿಲಿಕಾನ ಸಿಟಿಯಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಹೌದು ಸಚಿವ ಕೃಷ್ಣಭೈರೈಗೌಡರ್​ ಕ್ಷೇತ್ರದಲ್ಲಿ ಅವರ ಬೆಂಬಲಿಗರ ದೌರ್ಜನ್ಯ ಎಲ್ಲೆಮೀರಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಚಿವರ ಬೆಂಬಲಿಗ ಮುನಿರಾಜು ಎಂಬಾತ ಬಿಜೆಪಿ ಕಾರ್ಯಕರ್ತ ಕಾಂತರಾಜು ಎಂಬಾತನ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿದ್ದಾನೆ.  ರಸ್ತೆ ಕಾಮಗಾರಿ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತ ಕಾಂತರಾಜು ಎಂಬುವವನ ಮೇಲೆ ಹಲ್ಲೆ ಮಾಡಿ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಿದ್ದಾನೆ.

 

ಕೆಂಪಾಪುರದ ದಾಸನರಹಳ್ಳಿ ರಸ್ತೆಯನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಜಗಳ ಆರಂಭವಾಗಿದ್ದು, ದೊಡ್ಡದಾಗಿರುವ ರಸ್ತೆಯನ್ನು ಕಿರಿಯದು ಮಾಡಲು ಹೊರಟಿದ್ದಕ್ಕೆ ಬಿಜೆಪಿ ಕಾರ್ಯಕರ್ತ ಕಾಂತರಾಜು ಪ್ರಶ್ನಿಸಿದ್ದರು.
ಕಾಂತರಾಜು ಮೇಲೆ ಮುನಿರಾಜು ಹಾಗೂ ಬೆಂಬಲಿಗರು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯ ಆಧರಿಸಿ ದೂರು ನೀಡಲು ತೆರಳಿದರೂ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ದೂರು ಕೇಳಿಬಂದಿದೆ. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಅಮೃತಹಳ್ಳಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಪ್ರಭಾವಿಗಳ ದೌರ್ಜನ್ಯ ಎಲ್ಲೆ ಮೀರಿದ್ದು, ಪೊಲೀಸರು ಕೈಕಟ್ಟಿ ಕೂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.