ಎಮ್​ಎಲ್​ಎ ಆಯೋಜಿಸಿದ್ದ ಉಡಿತುಂಬುವ ಕಾರ್ಯಕ್ರಮದಲ್ಲಿ ನಡೆದಿದ್ದು ಅವಾಂತರ!

MLA Anil Lad Conduct Program for Women.
MLA Anil Lad Conduct Program for Women.

ಚುನಾವಣೆ ಹತ್ತಿರವಾಗ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಕಸರತ್ತು ಆರಂಭಿಸೋದು ಎಲ್ಲರಿಗೂ ಗೊತ್ತಿರೋ ಸಂಗತಿ.

ಅದರಲ್ಲೂ ರಾಜಕಾರಣಿಗಳು ಮಹಿಳಾ ಮತದಾರರನ್ನು ಸೀರೆ ಹಂಚಿ ಮನಸೆಳೆಯಲು ಯತ್ನಿಸುತ್ತಾರೆ. ಇಂತಹುದೇ ಕಾರ್ಯಕ್ರಮವೊಂದು ಬಳ್ಳಾರಿಯಲ್ಲಿ ನಡೆದಿದ್ದು, ಮಹಿಳಾ ಮತದಾರರನ್ನು ಸೆಳೆಯೋ ಪ್ರಯತ್ನದಲ್ಲಿದ್ದ ಆಯೋಜಕರೇ ಕಂಗಾಲಾದ ಘಟನೆ ನಡೆಯಿತು.  ನಿನ್ನೆ ಚುನಾವಣೆಗೆ ಪೂರ್ವಸಿದ್ಧತೆ ಎಂಬಂತೆ ಬಳ್ಳಾರಿ ನಗರದ ವಿವಿಧ ಪ್ರದೇಶಗಳ ಮಹಿಳೆಯರಿಗಾಗಿ ನಗರದ ವಾರ್ಡ್ಲಾ ಕಾಲೇಜು ಮೈದಾನದಲ್ಲಿ ಶಾಸಕ ಅನಿಲ್​ ಲಾಡ್​ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿದ್ರು.

 

ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ಶಾಸ್ತ್ರೋಕ್ತವಾಗಿ ಉಡಿತುಂಬುವ ಪ್ಲಾನ್​ ಮಾಡಲಾಗಿತ್ತು.  ಆದರೇ ಕಾರ್ಯಕ್ರಮ ಮುಗಿಯುವುದಕ್ಕೆ ಮುನ್ನವೆ ಮಹಿಳೆಯರು ತಂದಿರಿಸಲಾಗಿದ್ದ ಉಡಿ ಕಾಣಿಕೆಯನ್ನು ಮಹಿಳೆಯರು ಮನಸೋ ಇಚ್ಛೆ ಹೊತ್ತೊಯ್ದಿದ್ದಾರೆ. ಇದರಿಂದ ಕಾರ್ಯಕ್ರಮ ಆಯೋಜಕರು ಲಾಡ್ ಬೆಂಬಲಿಗರು ಕಕ್ಕಾಬಿಕ್ಕಿಯಾಗಿದ್ದಾರೆ. ಓರ್ವ ಮಹಿಳಿಗೆ ಒಂದೊಂದು ಉಡಿಯನ್ನ ಕಾಣಿಕೆ ನೀಡುವ ಸಲುವಾಗಿ ಪೊಟ್ಟಣಗಳನ್ನು ತಯಾರಿಸಲಾಗಿತ್ತು. ಆದ್ರೆ ಆಯೋಜಕರು ನೀಡುವ ಮೊದಲೇ ಉಡಿಯ ಕಾಣಿಕೆಗಳಿಗೆ ಕೈ ಹಾಕಿದ ಮಹಿಳೆಯರು ಮನಸೋ ಇಚ್ಛೆ ಹೊತ್ತೊಯ್ದರು.  ಇದರಿಂದ ಕಾರ್ಯಕ್ರಮದ ವೇಳೆ ನೂಕು ನುಗ್ಗಲು ಉಂಟಾಯಿತು. ಮಹಿಳೆಯರು ಪುರುಷರು ಎನ್ನದೇ ಕೈಗೆ ಸಿಕ್ಕಷ್ಟು ಕಾಣಿಕೆಯ ಪೊಟ್ಟಣಗಳನ್ನು ಹೊತ್ತೊಯ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯರನ್ನು ನಿಯಂತ್ರಿಸಲಾಗದೇ ಮೂಕ ಪ್ರೇಕ್ಷಕರಾಗಬೇಕಾಯಿತು.