ಜಿಗ್ನೇಶ್​ ಕಾರ್ಯಕ್ರಮದಲ್ಲಿ ಕಂತೆ-ಕಂತೆ ಹಣ ಹಂಚಿಕೆ- ಶಾಸಕರ ಕಾರ್ಯಕ್ರಮದಲ್ಲೇ ನೀತಿಸಂಹಿತೆ ಉಲ್ಲಂಘನೆ!

MLA Jignesh Mewani shared money to Peoples in the program.

ಭ್ರಷ್ಟಾಚಾರ ಹಾಗೂ ಮೋದಿ ವಿರುದ್ಧ ಸದಾ ಟೀಕಿಸುವ ಗುಜರಾತ ಶಾಸಕ ಜಿಗ್ನೇಶ್ ಮೇವಾನಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ನಿಯಮ ಉಲ್ಲಂಘಿಸಿ ಹಣ ಹಂಚಿಕೆ ಮಾಡಿದ ಆರೋಪ ಕೇಳಿಬಂದಿದೆ. ಹೌದು ಕೊಪ್ಪಳದ ಗಂಗಾವತಿಯಲ್ಲಿ ಆಯೋಜಿಸಿದ್ದ ಸಂವಿಧಾನ ಉಳಿವಿಗಾಗಿ ಸಮಾವೇಶದಲ್ಲಿ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ad

ಕೊಪ್ಪಳದ ಗಂಗಾವತಿಯಲ್ಲಿ ಆಯೋಜಿಸಿದ್ದ ಸಂವಿಧಾನ ಉಳಿವಿಗಾಗಿ ಸಮಾವೇಶದಲ್ಲಿ ಗುಜರಾತ್​ನ ವಡ್ಗಾಂ ಶಾಸಕ ಜಿಗ್ನೇಶ್ ಮೇವಾನಿ ಭಾಗವಹಿಸಿದ್ದರು.ಗಂಗಾವತಿ ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾವೇಶದ ಬಳಿಕ ಆಯೋಜಕರಿಗೆ ಜನರಿಗೆ ಕಂತೆ ಕಂತೆ ಹಣ ಹಂಚಿಕೆಯಾಗಿದೆ. ನೀತಿ ಸಂಹಿತೆ ಜಾರಿಯಾಗಿದ್ದರೂ ಸಾವಿರಾರು ರೂಪಾಯಿ ಹಣ ಹಂಚಿಕೆಯಾಗಿದ್ದು, ಕಂತೆ, ಕಂತೆ ಹಣ ಎಣಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಿಂದ ಜಿಗ್ನೇಶ್ ಮೇವಾನಿ ಕಾರ್ಯಕ್ರಮಕ್ಕೆ ಜನರನ್ನು ಹಣ ಕೊಟ್ಟು ಕರೆತರಲಾಗಿತ್ತಾ ಎಂಬ ಅನುಮಾನ ಮೂಡಿದೆ. ಅಲ್ಲದೇ ಸದಾಕಾಲ ಬಿಜೆಪಿ ಹಾಗೂ ಮೋದಿ ವಿರುದ್ಧ ಮಾತನಾಡುವ ಮೇವಾನಿಗೆ ಇದು ಗೊತ್ತಾಗಲಿಲ್ಲವೇ ಎಂಬ ಅನುಮಾನವೂ ಸೃಷ್ಟಿಯಾಗಿದೆ.