ಬೀದಿ ಬೀದಿಯಲ್ಲಿ ಅಟ್ಟಾಡಿಸಿ ಹೊಡಿತೀನಿ !! ತಿಪಟೂರು ಶಾಸಕ ಷಡಕ್ಷರಿಯ ಷಡ್ವೈರಿ ಕಾಟ !!

MLA K.Shadakshari Blames On Zilla Panchayat Member.
MLA K.Shadakshari Blames On Zilla Panchayat Member.

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳು, ಅಭ್ಯರ್ಥಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಕೂಗಾಡೋದು ಸಾಮಾನ್ಯವಾದ ಸಂಗತಿ.

ಈ ಸಾಲಿಗೆ ಇದೀಗ ಕಾಂಗ್ರೆಸ್ ಶಾಸಕ ಷಡಕ್ಷರಿ ಕೂಡ ಸೇರ್ಪಡೆಯಾಗಿದ್ದಾರೆ. ಷಡಕ್ಷರಿ ಜಿ.ಪಂ ಸದಸ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಇದೀಗ ವೈರಲ್​ ಆಗಿದ್ದು ಶಾಸಕರ ದೌರ್ಜನ್ಯ ಬೆಳಕಿಗೆ ಬಂದಿದೆ. ಷಡಕ್ಷರಿಗೆ ಟಿಕೇಟ್​ ಸಿಗೋದಿಲ್ಲ ಎಂದು ತಿಪಟೂರು ಕ್ಷೇತ್ರದಾದ್ಯಂತ ಜಿ.ಪಂ ಸದಸ್ಯ ಜಿ. ನಾರಾಯಣ್ ಹೇಳಿದ್ದರು ಎನ್ನಲಾಗಿದೆ. ಇದರಿಂದ ಕೆರಳಿದ ಷಡಕ್ಷರಿ ಜಿ.ನಾರಾಯಣ್ ಮೊಬೈಲ್ ಗೆ ಕರೆ ಮಾಡಿ ಖಡಕ್​ ಎಚ್ಚರಿಕೆ ನೀಡಿದ್ದಾನೆ. ಎಲ್ಲಾದ್ರೂ ನನ್ನ ಬಗ್ಗೆ ಮಾತಾಡಿದ್ರೆ ನಾಲಿಗೆ ಕೀಳಿಸಿ ಬಿಡ್ತೇನೆ. ತಿಪಟೂರಿನಿಂದ ಒದ್ದು ಓಡಿಸ್ತಿನಿ ಎಂದು ಅವಾಜ್​ ಹಾಕಿದ ಷಡಕ್ಷರಿ.

ನನ್ನ ಒಂದು ಮುಖ ನೋಡಿದ್ದೀರಾ ಇನ್ನೊಂದು ಮುಖ ನೋಡಿಲ್ಲ. ಬೆಂಬಲಿಗರಿನಿಂದ ಹೊಡೆಸ್ತಿನಿ. ಹಳ್ಳಿ ಹಳ್ಳಿಯಲ್ಲಿ ಓಡಾಡಿಸ್ಕೊಂಡು ಹೊಡಿಸ್ತೀನಿ. ಇದು ಮರ್ಯಾದೆಯ ಎಚ್ಚರಿಕೆ .ಹೊಡೆಯೋದಿಕ್ಕೆ ಪಾರ್ಟಿ ಮಿಟಿಂಗ್ ನಲ್ಲಿ ಕಾರ್ಯಕರ್ತರಿಗೆ ಹೇಳ್ತೀನಿ. ಆಶ್ರಯ ಕೊಟ್ಟಿರೋನು ನಾನೇ, ಕೊನೆಗೆ ತೆಗೆಯೋನು ನಾನೇ ಎಂದು ವಾರ್ನಿಂಗ್ ಮಾಡಿದ್ದಾರೆ.
ಷಡಕ್ಷರಿ ಜಿ.ಪಂ ಸದಸ್ಯನಿಗೆ ಕರೆ ಮಾಡಿದ ವೇಳೆ ಆತನ ಆಪ್ತ ಸಹಾಯಕ ಪೋನ್ ಎತ್ತಿಕೊಂಡಿದ್ದು, ಷಡಕ್ಷರಿ ಬೈಯ್ದಿದ್ದು ರೆಕಾರ್ಡ್​ ಮಾಡಿಕೊಂಡಿದ್ದಾರೆ. ಇದೀಗ ಆಡಿಯೋ ವೈರಲ್​ ಆಗಿದ್ದು, ಬಿಟಿವಿನ್ಯೂಸ್​ಗೂ ಲಭ್ಯವಾಗಿದೆ.