ಟಿಪ್ಪುಸುಲ್ತಾನ್ ಹುಲಿಯಲ್ಲ‌ ಇಲಿ- ಬಿಜೆಪಿ ಎಂಪಿ ಅನಂತಕುಮಾರ ಹೆಗಡೆ ವಾಗ್ದಾಳಿ

ad


ರಾಜ್ಯದಲ್ಲಿ ಟಿಪ್ಪು ಜಯಂತಿ ಯಶಸ್ವಿಯಾಗಿ ಮುಗಿದಿದ್ದರೂ ಅದರ ಹೆಸರಿನಲ್ಲಿ ಬಿಜೆಪಿ-ಕಾಂಗ್ರೆಸ್ ಕಚ್ಚಾಟ ಇನ್ನು ನಿಂತಿಲ್ಲ. ಸರ್ಕಾರದ ಟಿಪ್ಪು ಜಯಂತಿಯನ್ನು ಕಟುವಾಗಿ ಟೀಕಿಸುತ್ತಲೇ ಬಂದಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಕಟುವಾಗಿ ಟೀಕಿಸಿದ್ದು, ಟಿಪ್ಪು ಸುಲ್ತಾನ್ ಮೈಸೂರಿನ ಹುಲಿಯಲ್ಲ ಆತ ಒಬ್ಬ ಇಲಿ. ಅಷ್ಟೇ ಅಲ್ಲ ಆನನ್ಮಗನಿಗೆ ಇಲಿಗಿರುವಷ್ಟು ಯೋಗ್ಯತೆ ಕೂಡ ಎಂದು ನೇರಾ-ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅನಂತಕುಮಾರ ಹೆಗಡೆ, ಇತಿಹಾಸವನ್ನು ತಿರುಚಿ ಜನರಿಗೆ ಬೋಧಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಪರಿವರ್ತನಾ ರ್ಯಾಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

ಇನ್ನು ಪರಿವರ್ತನಾ ರ್ಯಾಲಿಗೂ ಮುನ್ನ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ​​ದಲ್ಲಿ ಮಾತನಾಡಿದ ಬಿಎಸ್​ವೈ, ಸಿದ್ದರಾಮಯ್ಯನವರನ್ನು ಕತ್ತೆಗೆ ಹೋಲಿಸಿದರು. ಸಿದ್ದರಾಮಯ್ಯನವರಿಗೆ ಖಾಸಗಿ ಆಸ್ಪತ್ರೆ ಅಭಿವೃದ್ಧಿ ಪಡಿಸುವ ಹುಚ್ಚು ಹಿಡಿದಿದೆ. ಸರ್ಕಾರಿ ಆಸ್ಪತ್ರೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಆಡಳಿತ ತುಘಲಕ ದರ್ಬಾರ ಎಂದು ಬಿಎಸ್​​ವೈ ಟೀಕಿಸಿದರು. ಒಟ್ಟಿನಲ್ಲಿ ಬಿಜೆಪಿ ನಾಯಕರು ಪರಿವರ್ತನಾ ರ್ಯಾಲಿ ಮೂಲಕ ಕಾಂಗ್ರೆಸ್ ವಿರುದ್ಧ ಸಮರ ಸಾರಿದ್ದು, ಕಟು ಟೀಕೆ ಮುಂದುವರಿಸಿದೆ.