ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ,ಎಂಪಿ ಅಭ್ಯರ್ಥಿ ವೀರಪ್ಪಮೊಯ್ಲಿ ಖಡಕ್​​ ವಾರ್ನಿಂಗ್!!!

ಚಿಕ್ಕಬಳ್ಳಾಪುರದಲ್ಲಿ ನಾಮ ಪತ್ರ ಸಲ್ಲಿಸಿದ ನಂತರ ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಒಕ್ಕಲಿಗರಿಗೆ ವಾರ್ನಿಂಗ್​ ನೀಡಿದ್ದಾರೆ. ನೀವು ಒಕ್ಕಲಿಗರು ಬಚ್ಚೇಗೌಡ ಮತಹಾಕಿದರೆ ಚುನಾವಣೆ ನಂತರ ಹೆಚ್​ಡಿಕೆ ಅಧಿಕಾರ ಕಳೆದುಕೊಳ್ತಾರೆ. ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗ ಸಮುದಾಯದವರೇ ನಿರ್ಣಾಯಕ ಮತಗಳು. ಬಚ್ಚೇಗೌಡ ಒಕ್ಕಲಿಗ ಸಮುದಾಯದ ಅಭ್ಯರ್ಥಿ.

ad

ಹಾಗಾಗಿ ಜಾತಿಗೆ ಮರುಳಾಗಿ ಮತ ಹಾಕಿದರೆ ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ತಾರೆ.. ಎಂದು ವೀರಪ್ಪ ಮೊಯ್ಲಿ ಖಡಕ್​​ ವಾರ್ನಿಂಗ್​ ನೀಡಿದ್ದಾರೆ. ಮೊಯ್ಲಿ ವಾರ್ನಿಂಗ್​​​ ಒಕ್ಕಲಿಗ ಸಮುದಾಯದಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಭಾನುವಾರ ಒಕ್ಕಲಿಗ ಮುಖಂಡರು ಸಭೆ ಕರೆದಿದ್ದಾರೆ. ಮೊಯ್ಲಿ ಹೇಳಿಕೆ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸೋತರೆ ಬೆಂಬಲ ಹಿಂತಗೆದುಕೊಳ್ಳುವ ಸಾಧ್ಯತೆ ಇದೆ. ಇದು ಜೆಡಿಎಸ್​ ಮುಖಂಡರನ್ನು ತೀವ್ರವಾಗಿ ಕೆರಳಿಸಿದೆ.