ರಾಜಮನೆತನದ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ-ಸಿಎಂಗೆ ಯದುವೀರ್ ತಿರುಗೇಟು!

Mysuru King Krishna Datta Yaduveer reacts on CM Siddaramiah's statement
Mysuru King Krishna Datta Yaduveer reacts on CM Siddaramiah's statement

ಮೈಸೂರು ಅರಸರು ಜನತೆಗೆ ನೀಡಿರುವ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ.

ಕೆ.ಆರ್.ಎಸ್​.ಡ್ಯಾಂ ಸೇರಿ ಹಲವು ಶಾಶ್ವತ ಯೋಜನೆಗಳು ರಾಜರ ಕೊಡುಗೆ ಏನು ಎಂಬುದನ್ನು ಹೇಳುತ್ತಿದೆ ಎಂದು ಮೈಸೂರು ಯುವರಾಜ ಯದುವೀರ್​ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್​ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಯದುವೀರ್ ನಾವು ಮಾಡಿದ ಸಾಧನೆಗಳನ್ನು ಜನರು ಹೇಳಬೇಕು. ರಾಜರ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ. ಕಾಲ ಬದಲಾಗಿದೆ. ಮೊದಲು ನಾಡಧ್ವಜದಲ್ಲಿ ತಾಯಿ ಚಾಮುಂಡೇಶ್ವರಿ ಮಾತೆ ಭಾವಚಿತ್ರ ಇತ್ತು. ನಂತರ ಮೈಸೂರು ರಾಜಮನೆತನದ ಲಾಂಛನ ಗಂಡಭೇರುಂದ ಇತ್ತು.

ಈಗ ಮತ್ತೆ ಬದಲಾಯಿಸಲಾಗಿದೆ ಎಂದು ಯದುವೀರ್ ತಿರುಗೇಟು ನೀಡಿದ್ದಾರೆ.
ಇತ್ತೀಚಿಗೆ ಮೈಸೂರಿಗೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ, ಮೈಸೂರು ಜಿಲ್ಲೆಗೆ ರಾಜರಿಗಿಂತ ಹೆಚ್ಚು ಕೊಡುಗೆಯನ್ನು ನಾನೇ ನೀಡಿದ್ದೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರಿಗೆ ಯದುವೀರ್ ಖಾರವಾಗಿ ಉತ್ತರಿಸುವ ಮೂಲಕ ಸಿಎಂ ಉದ್ಧಟತನಕ್ಕೆ ಸರಿಯಾದ ಉತ್ತರ ನೀಡಿದ್ದಾರೆ.