ಎಲೆಕ್ಷನ್​​ ಪ್ರಚಾರಕ್ಕೆ ಗ್ರೂಪ್​​ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಶಾಸಕರ್ಯಾರು ಗೊತ್ತಾ?

Mysuru: Peoples besom against MLA M K Somashekar in Whatsapp Group.
Mysuru: Peoples besom against MLA M K Somashekar in Whatsapp Group.

ರಾಜ್ಯದಲ್ಲಿ 2018 ರಲ್ಲಿ ಚುನಾವಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರಾಜಕಾರಣಿಗಳಿಗೆ ಈಗ ಧೀಡಿರ ತಮ್ಮ ತಮ್ಮ ಕ್ಷೇತ್ರದ ಕುರಿತು ಪ್ರೀತಿ ಹುಟ್ಟಿದೆ. ಹೀಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧವಾಗುತ್ತಿದ್ದಾರೆ.

ಆದರೇ ರಾಜಕಾರಣಿಗಳ ಈ ನಾಟಕಕ್ಕೆ ಜನರು ಕೂಡ ತಿರುಗೇಟು ಕೊಡಲು ಸಿದ್ಧವಾಗಿದ್ದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮೈಸೂರು ಶಾಸಕರೊಬ್ಬರು ಜನಸಾಮಾನ್ಯರ ಆಲಿಸಲು ಗ್ರೂಪ್ ಮಾಡಿ ಜನರಿಂದ ಹಿಗ್ಗಾಮುಗ್ಗಾ ಬೈಯಿಸಿಕೊಂಡು ಮುಜುಗರ ಎದುರಿಸಿದ್ದಾರೆ.
ಹೌದು ಮೈಸೂರು ಜಿಲ್ಲೆ ಕೆ.ಆರ್​ ಕ್ಷೇತ್ರದ ಶಾಸಕ ಸೋಮಶೇಖರ್, ಕ್ಷೇತ್ರದ ಸಮಸ್ಯೆ ಆಲಿಸಲು ಅಂತ ವಾಟ್ಸಪ್ ಗ್ರೂಪ್ ರಚನೆ ಮಾಡಿದ್ದರು. ಕೆ.ಆರ್ ಕ್ಷೇತ್ರ ಮತ್ತು ಪಬ್ಲಿಕ್​ ಹೆಸರಿನಲ್ಲಿ ಸಚಿವರು 7 ಗ್ರೂಪ್​ ಮಾಡಿದ್ದಾರೆ. ಶಾಸಕರ ಗನ್​ ಮ್ಯಾನ್​ ಮಹೇಶ್​ ಗ್ರೂಪ್​ ರಚಿಸಿದ್ದಾನೆ. ಶಾಸಕರು ವಾಟ್ಸಪ್​ ಗ್ರೂಪ್​ ಮಾಡುತ್ತಿದ್ದಂತೆ ಜನರು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರು ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

 

 

ವಾಟ್ಸಾಪಿನಲ್ಲಿ ಶಾಸಕರನ್ನು ಎರ್ರಾಬಿರ್ರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಾರ್ವಜನಿಕರು ಎಲೆಕ್ಷನ್​ ಹತ್ರಾ ಬಂತಾ? ಈಗ ನಮ್ಮ ನೆನಪಾಯಿತಾ ಎಂದೆಲ್ಲ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಇದೊಂದು ಈಡಿಯಟ್​ ಗ್ರೂಪ್​ ಎಂದ ಗ್ರಾಮಸ್ಥರು ಬಿಜೆಪಿ ಓಟ್ ಹಾಕುವಂತೆ ಅದೇ ಗ್ರೂಪ್​ನಲ್ಲಿ ಮೆಸೆಜ್​ ಹಾಕಿದ್ದಾರೆ. ಜನರ ಆಕ್ರೋಶ ಕಂಡು ಗಪ್​ಚುಪ್​ ಆದ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಸಾರ್ವಜನಿಕರ ಈ ಆಕ್ರೋಶಕ್ಕೆ ಬೆಚ್ಚಿದ ಶಾಸಕರು ಕೊನೆಗೆ ಗ್ರೂಪ್​ನಿಂದಲೇ ಎಕ್ಸಿಟ್​ ಆಗಿದ್ದು, ಅವರ ಗನ್ ಮ್ಯಾನ್ ಮಹೇಶ್ ಆ ಗ್ರೂಪಗೆ ಮೋದಿ ಪೋಟೋ ಹಾಕಿ ಜನರ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಜನರನ್ನು ಸೆಳೆಯಲು ಹೋಗಿ ಶಾಸಕರೇ ಪಜೀತಿಗೆ ಸಿಲುಕಿದ್ದು, ಮಾತ್ರ ವಿಪರ್ಯಾಸವೇ ಸರಿ.