ಸಿಎಂ ಆಪ್ತ ಭೈರತಿ ಕ್ಷೇತ್ರ ಕ್ರೈಂ ಪುರವಾಗಿದೆ- ನಂದೀಶ್​ ರೆಡ್ಡಿ ಗಂಭೀರ ಆರೋಪ!

Nandish Reddy Outrage Against MLA Byrathi Basavaraj.

ಕರ್ನಾಟಕ ವಿಧಾನಸಭೆ ಚುನಾವಣೆ ಕಣ ರಂಗೆರುತ್ತಿದೆ.

ಹೀಗಿರುವಾಗಲೇ ರಾಜ್ಯದಲ್ಲಿ ಚುನಾವಣಾ ಪಾಲಿಟಿಕ್ಸ್​ ಕೂಡ ಆರಂಭವಾದಂತಿದ್ದು, ಸಿಎಂ ಸಿದ್ದರಾಮಯ್ಯ ಆಪ್ತ ಎಂಎಲ್​ಎ ಭೈರತಿ ಬಸವರಾಜು ವಿರುದ್ಧ ಮಾಜಿ ಶಾಸಕ ನಂದೀಶ್ ರೆಡ್ಡಿ ಕಿಡಿಕಾರಿದ್ದು ಕೆ.ಆರ್.ಪುರಂ ಕಳೆದ 5 ವರ್ಷಗಳಲ್ಲಿ ಕ್ರೈಂ ಪುರವಾಗಿದೆ ಎಂದು ಆರೋಪಿಸಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಶಾಸಕ ನಂದೀಶ್​ ​​​ರೆಡ್ಡಿ, ಎಮ್​.ಎಲ್​.ಎ ಭೈರತಿ ಬಸವರಾಜು ಕ್ಷೇತ್ರ ಕೊಲೆ ಅತ್ಯಾಚಾರ ಹಾಗೂ ಸುಲಿಗೆ ತಾಣವಾಗಿದೆ. ಕೆ.ಆರ್.ಪುರಂನಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 102 ಮರ್ಡರ್ ನಡೆದಿದ್ದರೇ 100 ಕ್ಕೂ ಹೆಚ್ಚು ಅತ್ಯಾಚಾರವಾಗಿದೆ. 200 ಕ್ಕೂ ಹೆಚ್ಚು ಸರಗಳ್ಳತನ ಆಗಿವೆ. ಬೈರತಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕ್ರೈಂ ಕ್ಷೇತ್ರವಾಗಿದೆ ಎಂದಿದ್ದಾರೆ.

 

 

ಇನ್ನು ಭೈರತಿ ಬಸವರಾಜು ಅಭಿವೃದ್ಧಿ ಕಾರ್ಯ ಮಾಡದೇ ಅಪಾರ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿರುವ ನಂದೀಶ್ ರೆಡ್ಡಿ, ಕೆಆರ್ ಪುರಂ ಕ್ಷೇತ್ರಕ್ಕೆ ರಿಲೀಸ್​ ಆದ 1000 ಕೋಟಿಯಲ್ಲಿ 600 ಕೋಟಿ ಗುಳುಂ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಪರೋಕ್ಷ ಬೆಂಬಲದಿಂದಲೇ ಭೈರತಿ ಬಸವರಾಜು ಹೀಗೆ ಭ್ರಷ್ಟಾಚಾರ ನಡೆಸಿಕೊಂಡು ಹಾಯಾಗಿದ್ದಾರೆ ಎಂದು ನಂದೀಶ್ ರೆಡ್ಡಿ ಬಾಂಬ್​ ಸಿಡಿಸಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here