ಮೋದಿ ಆಗಮನಕ್ಕೆ ಸಿಲಿಕಾನ ಸಿಟಿ ಸಜ್ಜು- ನಗರ ಪೊಲೀಸರಿಂದ ಕಟ್ಟೆಚ್ಚರ!

Parivarthana Yatra: PM Modi Arrives Bengaluru At 4PM

ರಾಜ್ಯದಾದ್ಯಂತ ಬಿಜೆಪಿ ನಡೆಸಿದ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭಕ್ಕೆ ಸಿಲಿಕಾನ ಸಿಟಿ ಬೆಂಗಳೂರು ಸಜ್ಜಾಗಿದೆ.

 

ಪರಿವರ್ತನಾ ರ್ಯಾಲಿಯ ಸಮಾರೋಪದಲ್ಲಿ ಮೋದಿ ಭಾಗವಹಿಸಿ ಭಾಷಣ ಮಾಡಲಿದ್ದು ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ ಎಂದೇ ಬಿಂಬಿಸಲಾಗುತ್ತಿದೆ. ಇನ್ನು ಮೋದಿ ಆಗಮನದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಆಗಮಿಸುವ ಅರಮನೆ ಮೈದಾನ ಹಾಗೂ ನಗರದಾದ್ಯಂತ ಬಿಗಿಭದ್ರತೆ ಏರ್ಪಡಿಸಲಾಗಿದೆ. ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ. ಬಿಜೆಪಿ ಪರಿವರ್ತನಾ ಸಮಾವೇಶಕ್ಕೆ ಹೋರಾಟಗಾರರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಹೋರಾಟಗಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

 

 

ಅಲ್ಲದೇ ರೇಲ್ವೆನಿಲ್ದಾಣ, ಬಸ್ ನಿಲ್ದಾಣ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಅಲ್ಲದೇ ಸಮಾವೇಶ ನಡೆಯುವ ಪ್ಯಾಲೇಸ್​ ಗ್ರೌಂಡ್ ಸುತ್ತಲೂ ಖಾಕಿ ಕಣ್ಗಾವಲಿದೆ. ಪ್ರಧಾನಿ ಸಮಾವೇಶಕ್ಕೆ 11 ಡಿಸಿಪಿ, 33 ಎಸಿಪಿ, 122 ಇನ್ಸ್​ಪೆಕ್ಟರ್​​, 250 ಸಬ್ ಇನ್ಸ್ ಪೆಕ್ಟರ್ ಗಳು, 300 ಎಎಸ್ ಐಗಳು, 50 ಕೆಎಸ್ಆರ್​​ಪಿ ತುಕಡಿ ಹಾಗೂ 20 ಸಿಎಆರ್ ತುಕಡಿಗಳು ಸೇರಿ ಒಟ್ಟು ಮೂರು ಸಾವಿರ ನಾಗರಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹಾಗೇನೆ 1200 ಸಂಚಾರಿ ಪೊಲೀಸರನ್ನು ಸಂಚಾರ ನಿಯಂತ್ರಣಕ್ಕೆ ನಿಯೋಜಿಸಲಾಗಿದೆ. ಇದಲ್ಲದೇ ಗರುಡಾ ಪೋರ್ಸ್​, ಬಾಂಬ್​ ನಿಷ್ಕ್ರೀಯದಳ ಕೂಡ ಸ್ಥಳದಲ್ಲಿ ಮೊಕ್ಕಾ ಹೂಡಿದೆ. ಒಟ್ಟಿನಲ್ಲಿ ಮೋದಿ ಭದ್ರತೆಗೆ ಬೆಂಗಳೂರು ಪೊಲೀಸರು ಕಟಿಭದ್ಧರಾಗಿದ್ದು, ಯಾವುದೇ ಅಹಿಕತರ ಘಟನೆ ನಡೆಯದಂತೆ ಎಚ್ಚರವಹಿಸಿದ್ದಾರೆ.