ಮೋದಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಸಿದ್ಧವಾಗಿದೆ ಭರ್ಜರಿ ಭೋಜನ!

PM Modi Visit: Food Facility at BJP Convention in Bengaluru.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಮೋದಿ ಆಗಮನಕ್ಕೆ ಕ್ಷಣಗಣನೆ ನಡೆದಿದೆ.

ಲಕ್ಷಾಂತರ ಕಾರ್ಯಕರ್ತರು ಅರಮನೆ ಮೈದಾನದಲ್ಲಿ ಪ್ರಧಾನಿ ಸ್ವಾಗತಕ್ಕೆ ಸೇರಿದ್ದು, ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿರುವ ಕಾರ್ಯಕರ್ತರಿಗಾಗಿ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ.
1 ಲಕ್ಷದ 80 ಸಾವಿರ ಜನರಿಗೆ ಊಟದ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮಧ್ಯಾನದ ಭೋಜನಕ್ಕೆ ಅಕ್ಕಿ ಪಾಯಸ, ಪಲಾವು ಹಾಗೂ ಅನ್ನ ಸಾಂಬಾರು ಸಿದ್ಧವಾಗಿದೆ. ಅಲ್ಲದೇ 60 ಸಾವಿರ ಜನರಿಗೆ ಊಟ ಪಾರ್ಸಲ್ ನೀಡಲು ಪ್ರತ್ಯೇಕ ಸಿದ್ದತೆ ಮಾಡಲಾಗಿದೆ. ಒಟ್ಟು ನಾಲ್ಕು ಪ್ರತ್ಯೇಕ ಭೋಜನ ಶಾಲೆಗಳಲ್ಲಿ ಅಡಿಗೆ ತಯಾರಿ ನಡೀತಾ ಇದ್ದು, 236 ಕೌಂಟರ್ ಗಳಲ್ಲಿ ಊಟ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.

 

ಇದಲ್ಲದೇ ಈಗಾಗಲೇ ಒಟ್ಟು 60 ಸಾವಿರ ಜನರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗಿನ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿಬಾತು, ಟೊಮೋಟೋ ರೈಸ್ ಭಾತ್, ಬಿಸಿಬೇಳೇಭಾತ್ ಕಾಫಿ, ಟೀ ಸೇರಿ ಒಟ್ಟು 60 ಸಾವಿರ ಜನರಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಅನ್ನಪೂರ್ಣ ಕ್ಯಾಟರ್ಸ್, ಗಂಗಾ ಕ್ಯಾಟರ್ಸ್ ಹಾಗೂ ಪ್ರಸನ್ನ ಕ್ಯಾಟರ್ಸ್ ಅವರಿಗೆ ಊಟ ಒದಗಿಸುವ ಜವಾಬ್ದಾರಿ ನೀಡಲಾಗಿದೆ. ಒಟ್ಟಿನಲ್ಲಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸಿರುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಬಿಜೆಪಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ.