ಮತದಾರರನ್ನು ಸೆಳೆಯಲು ಹಂಚುತ್ತಿದ್ದ ಕುಕ್ಕರ್ ಲಾರಿ ವಶಕ್ಕೆ!

Police Confiscation Cooker filled lorry At Hubli.
Police Confiscation Cooker filled lorry At Hubli.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕಾರಣಿಗಳು ಮತದಾರರನ್ನು ಒಲೈಸುವಲ್ಲಿ ನಿರತರಾಗಿದ್ದಾರೆ.

ಮತದಾರರನ್ನು ಸೆಳೆಯಲು ಸೀರೆ,ಕುಕ್ಕರ್ ಹಂಚಿಕೆ ಜೋರಾಗಿದ್ದು, ಹೀಗೆ ಹಂಚಲು ತರಲಾಗಿದ್ದ ಕುಕ್ಕರ್​​ನ್ನು ಹುಬ್ಬಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮತದಾರರಿಗೆ ಹಂಚಲು ತರಲಾಗಿದ್ದ ಒಂದು ಲೋಡ್​​ ಕುಕ್ಕರ್​​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಕ್ಕರ್​ಗಳನ್ನ ಸಾಗಿಸ್ತಿದ್ದ ಮಿನಿ ಲಾರಿ ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಮಾರು 50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಚೆಕ್​​​ಪೋಸ್ಟ್​​ನಲ್ಲಿ ತಪಾಸಣೆ ಮಾಡಿದಾಗ ಅಕ್ರಮವಾಗಿ ಸಾಗಿಸುತ್ತಿದ್ದುದು ಕುಂಡು ಬಂದಿದೆ.

ಕೇಶ್ವಾಪುರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಪಕ್ಷಕ್ಕೆ ಸೇರಿವೆ ಅನ್ನೋ ಬಗ್ಗೆ ತನಿಖೆ ಮಾಡಲಾಗುವುದು ಅಂತಾ ಪೊಲೀಸ್​​ ‌ಕಮೀಷನರ್ ಹೇಳಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಚೆಕ್​​​ಪೋಸ್ಟ್​​ನಲ್ಲಿ ತಪಾಸಣೆ ಮಾಡಿದಾಗ ಅಕ್ರಮವಾಗಿ ಸಾಗಿಸುತ್ತಿದ್ದುದು ಕುಂಡು ಬಂದಿದೆ. ಕೇಶ್ವಾಪುರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಪಕ್ಷಕ್ಕೆ ಸೇರಿವೆ ಅನ್ನೋ ಬಗ್ಗೆ ತನಿಖೆ ಮಾಡಲಾಗುವುದು ಅಂತಾ ಪೊಲೀಸ್​​ ‌ಕಮೀಷನರ್ ಹೇಳಿದ್ದಾರೆ.