ಬಿ ಎಸ್ ಯಡಿಯೂರಪ್ಪಗೆ ಪತ್ರ ಬರೆದ ಡಿ ಕೆ ಶಿವಕುಮಾರ್ ! ಸವಾಲು ಸ್ವೀಕರಿಸ್ತಾರಾ ಮಾಜಿ ಸಿಎಂ ?

Minister DK Shivakumar wrote a letter to BS.Yeddyurappa.
Minister DK Shivakumar wrote a letter to BS.Yeddyurappa.

ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಇಂದನ ಸಚಿವ ಡಿ ಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಒಂದೊಳ್ಳೆ ಸವಾಲನ್ನು ಕೂಡಾ ಹಾಕಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಡಿಕೆಶಿ ಸವಾಲನ್ನು ಒಪ್ಪಿದ್ದೇ ಆದಲ್ಲಿ ರಾಜ್ಯಕ್ಕೆ ಭರ್ಜರಿ ಲಾಭವಾಗಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈಗೆ ಪತ್ರ ಬರೆದ ಇಂಧನ ಸಚಿವ ಡಿಕೆಶಿ

Minister DK Shivakumar wrote a letter to BS.Yeddyurappa.
Minister DK Shivakumar wrote a letter to BS.Yeddyurappa.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆಡಳಿತಾವಧಿಯಲ್ಲಿ ಅಧಿಕ ಧರ ನೀಡಿ ವಿದ್ಯುತ್ ಖರೀಧಿ ಮಾಡುತ್ತಿದ್ದಾರೆ. ಯೂನಿಟ್ ಗೆ 2.50 ದರದಂತೆ ಕೇಂದ್ರ ಸರ್ಕಾರ ವಿದ್ಯುತ್ ನೀಡಲು ಮುಂದಾಗಿದ್ದರೂ ಅದನ್ನು ಅತ್ಯಧಿಕ ದರದಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದರು.

ಯಡಿಯೂರಪ್ಪ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿರುವ ಇಂದನ ಸಚಿವ ಡಿ ಕೆ ಶಿವಕುಮಾರ್, 2.50 ರೂಪಾಯಿಯ ವಿದ್ಯುತ್ ಗಾಗಿ ಜಾಲಾಡಿದ್ದಾರೆ. ಕೊನೆಗೆ ನಿಸ್ಸಾಹಾಯಕರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

Minister DK Shivakumar wrote a letter to BS.Yeddyurappa.
Minister DK Shivakumar wrote a letter to BS.Yeddyurappa.

ಕೇಂದ್ರ ಸರ್ಕಾರ ಯೂನಿಟ್ ಗೆ 2.50 ರೂ ದರದಂತೆ ವಿದ್ಯುತ್ ನೀಡಲು ಮುಂದೆ ಬಂದರೆ ರಾಜ್ಯ ಸರ್ಕಾರ ಪ್ರಚಲಿತವಿರುವ ಎಲ್ಲ ಒಪ್ಪಂದಗಳನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ನೀಡುವ ವಿದ್ಯುತ್ತನ್ನು ಖರೀದಿಸುತ್ತೇವೆ ಎಂದು ಪತ್ರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

2.50 ರೂಪಾಯಿಯಲ್ಲಿ ಯೂನಿಟ್ ವಿದ್ಯುತ್ ದೊರಕುವುದು ಹೌದೇ ಆಗಿದ್ದಲ್ಲಿ ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಯಡಿಯೂರಪ್ಪ ಮುಂದಾಳತ್ವ ವಹಿಸಲಿ ಎಂದು ಮನವಿ ಮಾಡುವ ರೀತಿಯಲ್ಲಿ ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.