ಜೆಡಿಎಸ್ ಕಲ್ಯಾಣಕ್ಕೆ ಬರ್ತಿದ್ದಾರೆ ಪವನ್ !! ಜನತಾದಳಕ್ಕೆ ಜನಸೇನೆಯ ಪವರ್ ಸ್ಟಾರ್ ಪ್ರಚಾರ !!

Power Star Pawan Kalyan is campaigning for JDS.
Power Star Pawan Kalyan is campaigning for JDS.

ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ 2018 ರ ಚುನಾವಣೆಗೆ ಜೆಡಿಎಸ್ ಪ್ರಚಾರಕ್ಕೆ ಖ್ಯಾತ ನಟ ಪವನ್ ಕಲ್ಯಾಣ್ ಕರ್ನಾಟಕಕ್ಕೆ ಬರಲಿದ್ದಾರೆ.

 

2018 ರ ಚುನಾವಣೆಗೆ ಈಗಾಗಲೇ ರಂಗೇರಿದ್ದು ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಕರ್ನಾಟಕದ ಗಡಿ ಭಾಗಗಳಲ್ಲಿ ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆ.

ವಿಧಾನಸಭೆ ಸಮರ ಗೆಲ್ಲಲು ದಳಪತಿ ಎಚ್ ಡಿ ಕುಮಾರಸ್ವಾಮಿ ಭರ್ಜರಿ ರಣತಂತ್ರ ಮಾಡಿದ್ದು, ಅದರ ಭಾಗವಾಗಿ ಜೆಡಿಎಸ್​ ಪರ ಪವರ್​​ ಸ್ಟಾರ್​​ ಪವನ್​ ಕಲ್ಯಾಣ್​​​ ಬರಲಿದ್ದಾರೆ.

 

 

ತೆಲುಗು ಪ್ರಭಾವದ ಪ್ರದೇಶಗಳಲ್ಲಿ ಗಬ್ಬರ್​ಸಿಂಗ್​​ ಪ್ರಚಾರ ನಡೆಸಲಿದ್ದು, ಕೋಲಾರ,ಚಿಕ್ಕಬಳ್ಳಾಪುರ,ಬಳ್ಳಾರಿ, ರಾಯಚೂರು
ಬೆಂ.ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಪವನ್​​ ಕ್ಯಾಂಪೇನ್​​ ಮಾಡಲಿದ್ದಾರೆ.

ಆಂಧ್ರ-ತೆಲಂಗಾಣದಲ್ಲಿ ಜನಸೇನೆ ಕಟ್ಟಿರುವ ಪವನ್​ಕಲ್ಯಾಣ್​​, ಲೋಕಸಭೆ ಚುನಾವಣೆ ವೇಳೆ ಮೋದಿ ಪರ ನಿಂತಿದ್ದರು. ಇದು ಬಿಜೆಪಿಗೆ ಲಾಭ ತಂದುಕೊಟ್ಟಿತ್ತು. ನಂತರ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಸಿಡಿದೆದ್ದಿರುವ ಪವರ್​ಸ್ಟಾರ್, ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಲು ಚಿಂತನೆ ನಡೆಸಿದ್ದಾರೆ.