ಕರುನಾಡಿಗೆ ಸಿದ್ದವಾಗ್ತಿರೋ ಧ್ವಜ ಹೇಗಿದೆ ಗೊತ್ತಾ??

Prepare a New form for Kannada flag.

ಕನ್ನಡಿಗರ ಹೆಮ್ಮೆಯಾಗಿರುವ ಕನ್ನಡ ಧ್ವಜಕ್ಕೆ ಹೊಸ ರೂಪ ಕೊಡಲು ತಯಾರಿ ನಡೆದಿದೆ.

ad

ಹೌದು ಕೆಂಪು ಹಳದಿ ಬಣ್ಣದ ಮಧ್ಯೆ ಬಿಳಿ ಬಣ್ಣ ಹಾಗೂ ಸರ್ಕಾರದ ಲಾಂಛನ ಸೇರಿಸಲು ಶಿಫಾರಸ್ಸು ಮಾಡಲಾಗಿದ್ದು, ಹೊಸ ನಾಡ ಧ್ವಜ ರಚನೆಗೆ ವೇದಿಕೆ ಸಜ್ಜಾಗಿದೆ.
ಈಗಾಗಲೇ ಆಯೋಗ ಹಳದಿ ಮತ್ತು ಕುಂಕುಮ ಬಣ್ಣದ ಧ್ವಜ ರಾಜಕೀಯ ಪಕ್ಷದ ಧ್ವಜ. ಹೀಗಾಗಿ ಇದನ್ನ ಕನ್ನಡ ಧ್ವಜವೆಂದು ಬಳಕೆ ಮಾಡದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಇದು ರಾಜಕೀಯ ಪಕ್ಷಕ್ಕೆ ಸೇರಿದ್ದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೇ ಕನ್ನಡ ಧ್ವಜವನ್ನ ಬಳಕೆ ಮಾಡೊದು ತಪ್ಪು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಹೊಸ ನಾಡ ಧ್ವಜ ರಚನೆಗೆ ಸಿಎಂ ಸಿದ್ದರಾಮಯ್ಯ ವೇದಿಕೆ ರಚಿಸಿದ್ದಾರೆ.

 

ಇನ್ನು ಕೇಂದ್ರದ ಅನುಮೋದನೆ ಪಡೆದು ಹೊಸ ಧ್ವಜ ಬಳಕೆಗೆ ಉಲ್ಲೇಖಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಾಡಧ್ವಜ ರಚನಾ ಸಮಿತಿ ವರದಿ ನೀಡಲು ನಿರ್ಧರಿಸಿದೆ. ಕ್ಯಾಬಿನೆಟ್​ ಒಪ್ಪಿಗೆ ಬಳಿಕ ಕೇಂದ್ರದ ಅನುಮತಿ ಕೋರಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಚುನಾವಣೆಗೆ ಮುನ್ನ ಕೇಂದ್ರದ ಅನುಮತಿ ಪಡೆಯಲು ಸಿಎಂ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಕರುನಾಡಿಗೆ ಹೊಸ ಧ್ವಜ ಸಿದ್ಧವಾಗಲಿದ್ದು, ಕನ್ನಡಿಗರ ಹೆಮ್ಮೆಯ ಪ್ರತೀಕವಾಗಲಿದೆ.